ADVERTISEMENT

ಹಿರಿಯಡಕ: ಶಿರೂರು ಮೂಲಮಠದಲ್ಲಿ ರಾಮ ನವಮಿ ಉತ್ಸವ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 12:05 IST
Last Updated 14 ಏಪ್ರಿಲ್ 2019, 12:05 IST
ರಾಮನವಮಿ ಉತ್ಸವದ ಅಂಗವಾಗಿ ಮಠವನ್ನು ವಿದ್ಯುದ್ದೀಪ ಹಾಗೂ ಪುಷ್ಪಗಳಿಂದ ಅಲಂಕರಿಸಲಾಗಿತ್ತು
ರಾಮನವಮಿ ಉತ್ಸವದ ಅಂಗವಾಗಿ ಮಠವನ್ನು ವಿದ್ಯುದ್ದೀಪ ಹಾಗೂ ಪುಷ್ಪಗಳಿಂದ ಅಲಂಕರಿಸಲಾಗಿತ್ತು   

ಹಿರಿಯಡಕ: ಹಿರಿಯಡಕ ಸಮೀಪದ ಶಿರೂರು ಮೂಲ ಮಠದಲ್ಲಿ ರಾಮನವಮಿ ಉತ್ಸವ ಶನಿವಾರ ಸೋದೆ ಮಠದ ಯತಿಗಳಾದ ವಿಶ್ವವಲ್ಲಭ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

ಶನಿವಾರ ಮಠದಲ್ಲಿ ರಾಮನವಮಿಯ ಅಂಗವಾಗಿ ದೇವರಿಗೆ ಪಂಚಾಮೃತ ಮಹಾಭಿಷೇಕ ಸಹಿತ ಮಹಾಪೂಜೆ, ಮನ್ಯುಸೂಕ್ತ ಹೋಮ, ಪಲ್ಲ ಪೂಜೆ,‌ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ಮುಖ್ಯಪ್ರಾಣ ದೇವರಿಗೆ ವಿಶೇಷ ರಂಗ ಪೂಜೆ, ಭೂತರಾಜರ ಪೂಜೆ, ರಥೋತ್ಸವ, ಓಲಗ ಮಂಟಪ ಪೂಜೆ, ಅಷ್ಟಾವಧಾನ ಸೇವೆ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಡಗುತಿಟ್ಟಿನ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ 'ಸುಭದ್ರಾ ಕಲ್ಯಾಣ' ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.ಭಾನುವಾರ ಬೆಳಿಗ್ಗೆ ಹಗಲು ರಥೋತ್ಸವ, ಅವಭೃತೋತ್ಸವ ನಡೆಯಿತು.

ಜೀರ್ಣೋದ್ಧಾರಗೊಂಡಿರುವ ಮಠವನ್ನು ರಾಮನವಮಿ ಉತ್ಸವದ ಅಂಗವಾಗಿ ವಿದ್ಯುದ್ದೀಪ ಹಾಗೂ ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.