ADVERTISEMENT

ಉಡುಪಿ | ರಸ್ತೆ ಅಭಿವೃದ್ಧಿಗೆ ₹ 16 ಕೋಟಿ: ಮೆಂಡನ್‌

ಕೊಡಿಬೆಟ್ಟು ಗ್ರಾಮ ಪಂಚಾಯಿತಿ: ಶಾಸಕರಿಂದ ಅಹವಾಲು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 4:35 IST
Last Updated 26 ಜೂನ್ 2022, 4:35 IST
ಕೊಡಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಲಾಲಾಜಿ ಮೆಂಡನ್ ಅಹವಾಲು ಸ್ವೀಕರಿಸಿ ವಿವಿಧ ಸವಲತ್ತು ವಿತರಿಸಿದರು
ಕೊಡಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಲಾಲಾಜಿ ಮೆಂಡನ್ ಅಹವಾಲು ಸ್ವೀಕರಿಸಿ ವಿವಿಧ ಸವಲತ್ತು ವಿತರಿಸಿದರು   

ಹಿರಿಯಡಕ: ಕೊಡಿಬೆಟ್ಟು ಗ್ರಾಮ ಪಂಚಾಯಿತಿ ಸ್ವಚ್ಛತೆ ಬಗ್ಗೆ ಗ್ರಾಮಗಳಲ್ಲಿ ವಿಶೇಷ ಕಾಳಜಿ ವಹಿಸಿ, ಸ್ವಚ್ಛ ಗ್ರಾಮವಾಗಿ ಗುರುತಿಸಿಕೊಂಡಿದ್ದು ಅಭಿನಂದನಾರ್ಹ. ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿದ್ದು ಈ ಭಾಗಗಳಲ್ಲಿ ಹೆಚ್ಚಿನ ರಸ್ತೆಗಳು ಗ್ರಾಮೀಣ ಪ್ರದೇಶದ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳಾಗಿದ್ದು ₹ 16 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟು ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮೊತ್ತದ ಅನುದಾನವನ್ನು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನೀಡಲಾಗುವುದು ಎಂದುಶಾಸಕ ಲಾಲಾಜಿ ಆರ್. ಮೆಂಡರ್‌ ತಿಳಿಸಿದರು.

ಇವರು ಕೊಡಿಬೆಟ್ಟು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಪರಿಶೀಲನೆ, ಸವಲತ್ತು ವಿತರಣೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಈ ವೇಳೆ ಗ್ರಾಮ ಪಂಚಾಯಿತಿ ಹತ್ತಿರ ನೂತನ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರವನ್ನು ಉದ್ಘಾಟಿಸಿದರು.

ADVERTISEMENT

ಪಂಚಾಯಿತಿ ವ್ಯಾಪ್ತಿಯಲ್ಲಿ 94ಸಿ ಹಕ್ಕುಪತ್ರ, ಬಸವ ವಸತಿ ಹಾಗೂ ಅಂಬೇಡ್ಕರ್ ನಿಗಮದ ವಸತಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರ, ಪ್ರಾಕೃತಿಕ ವಿಕೋಪ ನಿಧಿ ಚೆಕ್, ವೃದ್ಧಪ್ಯಾವೇತನ ವಿತರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಶೆಟ್ಟಿ, ಉಪಾಧ್ಯಕ್ಷ ಸದಾನಂದ ಪ್ರಭು, ಹಿರಿಯಡಕ ಪೊಲೀಸ್ ಠಾಣಾ ಉಪನಿರಿಕ್ಷಕ ಅನಿಲ್ ಮಾದರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ನಾಯ್ಕ್, ತೋಟಗಾರಿಕೆ ಇಲಾಖೆ ಅಧಿಕಾರಿ ಹೇಮಂತ್, ಅರಣ್ಯ ಇಲಾಖೆ ಅಧಿಕಾರಿ ರಿಜಿನ್ ಮ್ಯಾತ್ಯು, ಪಶುವೈದ್ಯಾಧಿಕಾರಿ ಡಾ. ಪುಷ್ಪ, ಗ್ರಾಮ ಲೆಕ್ಕಧಿಕಾರಿ ಗಜೇಂದ್ರ ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಪ್ರಮುಖರಾದ ಅನಿಲ್ ಶೆಟ್ಟಿ, ಶ್ರೀಶ ನಾಯಕ್, ಉಪೇಂದ್ರ ನಾಯಕ್, ಅರುಣ್ ಶೆಟ್ಟಿ, ಸಂಧ್ಯಾ ಕಾಮತ್, ರಾಜಕುಮಾರ್, ಕೃಷ್ಣ ಕುಲಾಲ್ ಕೊಡಿಬೆಟ್ಟು, ಶ್ರೀನಿವಾಸ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.