ADVERTISEMENT

ಉಡುಪಿ: ಸಾಮಗಾನ ಅಧ್ಯಾತ್ಮ ಕೇಂದ್ರ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 12:42 IST
Last Updated 2 ಜೂನ್ 2025, 12:42 IST
ಕೊಡವೂರಿನ ಲಕ್ಷ್ಮೀನಗರದಲ್ಲಿ ಸಾಮಗಾನ ಅಧ್ಯಾತ್ಮ ಮತ್ತು ಕಲಾ ಕೇಂದ್ರವನ್ನು ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಈಚೆಗೆ ಉದ್ಘಾಟಿಸಿದರು
ಕೊಡವೂರಿನ ಲಕ್ಷ್ಮೀನಗರದಲ್ಲಿ ಸಾಮಗಾನ ಅಧ್ಯಾತ್ಮ ಮತ್ತು ಕಲಾ ಕೇಂದ್ರವನ್ನು ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಈಚೆಗೆ ಉದ್ಘಾಟಿಸಿದರು   

ಉಡುಪಿ: ಯಕ್ಷಗಾನ ಕಲಾವಿದಾರಾಗಿದ್ದ ಕಮಲಾಕ್ಷಿ ಮತ್ತು ಶಂಕರನಾರಾಯಣ ಸಾಮಗ (ದೊಡ್ಡ ಸಾಮಗ) ಸ್ಮರಣೆಗಾಗಿ ಕೊಡವೂರಿನ ಲಕ್ಷ್ಮೀ ನಗರದಲ್ಲಿ ಸ್ಥಾಪಿಸಿರುವ ಸಾಮಗಾನ ಅಧ್ಯಾತ್ಮ ಮತ್ತು ಕಲಾಕೇಂದ್ರವನ್ನು ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಈಚೆಗೆ ಉದ್ಘಾಟಿಸಿದರು.

ಶಂಕರ ಜಯಂತಿ ಮಹೋತ್ಸವದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ರವೀಂದ್ರ ಹೆಬ್ಬಾರ್ ಬವಲಾಡಿ ಮತ್ತು ವೈದಿಕ ವೃಂದದವರಿಂದ ವಿಷ್ಣು ಸಹಸ್ರನಾಮ ಮತ್ತು ರುದ್ರ ಪಠಣ ನಡೆಯಿತು. ಗಣಪತಿ ಜೋಶಿ ಅವರು ಆದಿ ಶಂಕರರ ಕುರಿತು ಉಪನ್ಯಾಸ ನೀಡಿದರು.

ಮುಖಂಡ ಪ್ರಮೋದ್ ಮಧ್ವರಾಜ್, ಮುರಳಿ ಉಪಾಧ್ಯಾಯ, ಅಲ್ವಿನ್ ದಾಂತಿ, ವಿಜಯ ಕೊಡವೂರು, ವಾರಿಜ ರಾವ್ ಮಾತನಾಡಿದರು. ಮೊಗೇರಿ ಜನಾರ್ದನ ಅಡಿಗ ಕವನ ವಾಚಿಸಿದರು. ಲಕ್ಷ್ಮೀನಾರಾಯಣ ಸಾಮಗ ಅಧ್ಯಕ್ಷತೆ ವಹಿಸಿದ್ದರು. ಅನುಪಮಾ ಸ್ವಾಗತಿಸಿದರು. ಮಧ್ವ ನಗರದ ವಿಶ್ವಕರ್ಮ ಕುಣಿತ ಭಜನಾ ಮಂಡಳಿಯಿಂದ ಭಜನೆ ನೆರವೇರಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.