ADVERTISEMENT

ಸ್ವಾವಲಂಬಿ ಬದುಕಿನ ‘ಸಂಜೀವಿನಿ’

ಗ್ರಾಮೀಣ ಮಹಿಳೆಯರ ಗೃಹ ಉತ್ಪನ್ನಗಳಿಗೆ ನೇರ ಮಾರುಕಟ್ಟೆ; ಗ್ರಾಹಕರಿಗೂ ಅನುಕೂಲ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 5:04 IST
Last Updated 24 ಸೆಪ್ಟೆಂಬರ್ 2022, 5:04 IST
ಸಂಜೀವಿನಿ ಸಂತೆಯ ನೋಟ
ಸಂಜೀವಿನಿ ಸಂತೆಯ ನೋಟ   

ಬ್ರಹ್ಮಾವರ: ಗ್ರಾಮೀಣ ಭಾಗದ ಮಹಿಳೆಯರು ಪರಾವಲಂಬನೆ ಇಲ್ಲದೇ ಬದುಕು ನಡೆಸಲು ನೆರವಾಗಲು ಸರ್ಕಾರ ಆರಂಭಿಸಿರುವ ಸಂಜೀವಿನಿ ಸಂಘ ಇಲ್ಲಿನ ವಾರಂಬಳ್ಳಿ ಪಂಚಾಯಿತಿಯಲ್ಲಿ ಮಹಿಳೆಯರ ಕೈ ಹಿಡಿದಿದೆ.

ಸಂಜೀವಿನಿ ಒಕ್ಕೂಟಗಳ ಮಾಸಿಕ ಸಂತೆ ಎರಡನೇ ಶನಿವಾರ ನಡೆಯುತ್ತಿದ್ದು ಸದಸ್ಯರು ಮನೆಯಲ್ಲಿ ತಯಾರಿಸಿದ ಹಲಸಿನ ಹಪ್ಪಳ, ಹಲಸಿನ ಚಿಪ್ಸ್, ಸಾಂಬಾರು ಪುಡಿ, ಬಟ್ಟೆಯ ಕೈಚೀಲ, ಕಜ್ಜಾಯ, ಚಕ್ಕುಲಿ, ಹಲ್ವ, ಅಕ್ಕಿ ರೊಟ್ಟಿ, ಅಕ್ರೂಟ್, ಕಾಳುಮೆಣಸು, ಅರಸಿನ ಪುಡಿ, ಕಷಾಯ ಪುಡಿ, ನೋವಿನ ಎಣ್ಣೆ, ಸಾವಯವ ತರಕಾರಿಗಳು ನೇರವಾಗಿ ಗ್ರಾಹಕರ ಕೈ ಸೇರುತ್ತಿವೆ.

ಸಂಜೀವಿನಿ ಸಂಘದ ಸದಸ್ಯೆ ಕೊಕ್ಕರ್ಣೆ ಮುದ್ದೂರಿನ ಅಮೃತಕಲಾ ಅವರ ಪ್ರಕಾರ ಸಂಜೀವಿನಿ ಸಂತೆಗೆ ಬರುತ್ತಿರುವುದರಿಂದ ಆದಾಯ ಹೆಚ್ಚಿದೆ. ನೇರ ಮಾರಾಟದಿಂದ ಮಹಿಳೆಯರಲ್ಲಿ ವ್ಯವಹಾರ ಜ್ಞಾನದಲ್ಲೂ ಮಹಿಳೆಯರು ಮುಂದುವರಿದಿದ್ದಾರೆ. ಉತ್ಪನ್ನಗಳನ್ನು ಮನೆಯಲ್ಲಿಯೇ ತಯಾರಿಸಿದುದರಿಂದ ಸ್ವಚ್ಛವಾಗಿದ್ದು ಗುಣಮಟ್ಟ ಉತ್ತಮವಾಗಿರುತ್ತದೆ.

ADVERTISEMENT

ವಿವಿಧ ಉತ್ಪನ್ನಗಳು ಒಂದೇ ಕಡೆ ದೊರೆಯುವುದರಿಂದ ಮತ್ತು ದಲ್ಲಾಳಿಗಳ ಮಧ್ಯಸ್ಥಿಕೆ ಇಲ್ಲದೆ ನೇರವಾಗಿ ಗೃಹ ಉತ್ಪನ್ನಗಳು ಗ್ರಾಹಕರಿಗೆ ಕಡಿಮೆ ದರದಲ್ಲಿ ಸಿಗುವಂತೆ ಮಾಡಿರುವುದರಿಂದ ಸಂಜೀವಿನಿ ಸಂತೆಯಿಂದ ಗ್ರಾಹಕರಿಗೂ ಸಹಾಯವಾಗುತ್ತದೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.