ADVERTISEMENT

‘ವಂದೇಮಾತರಂ ಗೀತೆ ಸ್ಫೂರ್ತಿಯ ಸೆಲೆ’

ಶಿರ್ವ ವಿದ್ಯಾವರ್ಧಕ ಇಂಗ್ಲಿಷ್ ಮಾಧ್ಯಮ ಶಾಲೆ: ವಂದೇಮಾತರಂ 150ರ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:00 IST
Last Updated 26 ನವೆಂಬರ್ 2025, 5:00 IST
ವಂದೇಮಾತರಂ 150ರ ಸಂಭ್ರಮ ಕಾರ್ಯಕ್ರಮಕ್ಕೆ ಶ್ಯಾಮಲ ಕುಂದರ್ ಚಾಲನೆ ನೀಡಿದರು
ವಂದೇಮಾತರಂ 150ರ ಸಂಭ್ರಮ ಕಾರ್ಯಕ್ರಮಕ್ಕೆ ಶ್ಯಾಮಲ ಕುಂದರ್ ಚಾಲನೆ ನೀಡಿದರು   

ಶಿರ್ವ: ವಂದೇ ಮಾತರಂ ಗೀತೆ ಜನರಲ್ಲಿ ಸ್ಫೂರ್ತಿ, ಆತ್ಮವಿಶ್ವಾಸ, ದೇಶಪ್ರೇಮ, ದೇಶಭಕ್ತಿಯನ್ನು ತುಂಬುವ ಮಂತ್ರ. ಯುವಕರಲ್ಲಿ ಜಾಗೃತಿ ಮೂಡಿಸಿ ದೇಶಪ್ರೇಮ, ಒಗ್ಗಟ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಇಲ್ಲಿನ ವಿದ್ಯಾವರ್ಧಕ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ ‘ವಂದೇ ಮಾತರಂ 150ರ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲ ಕುಂದರ್ ದೀಪ ಬೆಳಗಿಸಿ, ಭಾರತಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ವಂದೇ ಮಾತರಂ ಗೀತೆ ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತ ಮಿಗಿಲು ಎಂಬ ಸಂದೇಶ ಸಾರುವ ಗೀತೆಯಾಗಿದ್ದು, ಯುವಪೀಳಿಗೆಯ ಧ್ವನಿಯಾಗಬೇಕು’ ಎಂದರು. ‌

ADVERTISEMENT

ಅಧ್ಯಕ್ಷತೆ ವಹಿಸಿದ್ದ ಶಾಸಕ, ಶಿರ್ವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುರ್ಮೆ ಸುರೇಶ್ ಪಿ. ಶೆಟ್ಟಿ ಮಾತನಾಡಿ, ಜಾತಿ– ಮತ, ಧರ್ಮದ ಭೇದವಿಲ್ಲದೆ ದೇಶಪ್ರೇಮ ಮೆರೆಯಬೇಕು ಎಂದರು.

ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ. ಭಾಸ್ಕರ ಶೆಟ್ಟಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ವಂದೇ ಮಾತರಂ ಗೀತೆ ಬ್ರಿಟಿಷರ ವಿರುದ್ಧ ಹೋರಾಡಲು ಯುವಕರಿಗೆ, ವಿದ್ಯಾರ್ಥಿಗಳಿಗೆ ಪ್ರೇರಣೆ, ಶಕ್ತಿ ತುಂಬಿಸಿತ್ತು ಎಂದರು.

700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಂದೇ ಮಾತರಂ ಗೀತೆಯನ್ನು ಸಾಮೂಹಿಕವಾಗಿ ಹಾಡಿದರು. ಪ್ರಾಂಶುಪಾಲೆ ನೀಶಾ ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ವಿಭಾಗದ ವಿಜಯ್ ಕುಮಾರ್, ಅಶ್ವಿನಿ ಭಾಗವಹಿಸಿದ್ದರು. ಶಿಕ್ಷಕಿ ಅನಿತಾ ಉಪಾಧ್ಯಾಯ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.