ADVERTISEMENT

ಕಾರ್ಕಳ: ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿ ರಾಜ್ಯಕ್ಕೆ ತೃತೀಯ

​ಪ್ರಜಾವಾಣಿ ವಾರ್ತೆ
Published 9 ಮೇ 2023, 16:07 IST
Last Updated 9 ಮೇ 2023, 16:07 IST
ಅನಂತ್ ಎನ್.ಕೆ
ಅನಂತ್ ಎನ್.ಕೆ   

ಕಾರ್ಕಳ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಗರದ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಅನಂತ್ ಎನ್.ಕೆ 625ಕ್ಕೆ 623 ಅಂಕಗಳನ್ನು ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದರೆ, 621 ಅಂಕಗಳನ್ನು ಪಡೆದ ಅನಘ ವಿ. ರಾಜ್ಯಕ್ಕೆ ಐದನೇ ರ್‍ಯಾಂಕ್ ಪಡೆದಿದ್ದಾರೆ.

ಸಂಸ್ಥೆಯ ಒಟ್ಟು 118 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸಂಸ್ಥೆ ಸತತ 11ನೇ ಬಾರಿಗೆ ಶೇ. 100 ಫಲಿತಾಂಶ ದಾಖಲಿಸಿದೆ.

13 ಮಂದಿ ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿದ್ದು, 42 ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. 71 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 47 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ADVERTISEMENT

ಸ್ನೇಹಲ್ ಪಿಂಟೊ 609, ಸುದೀಕ್ಷಾ ಶೆಟ್ಟಿ 609, ಅಲ್ವಿನಿಯಾ ಡೇಸ 606, ಲಿಯಾನಾ ನತಾಲ್ ರೋಡ್ರಿಗಸ್ 606, ನವೀದ್ ಝಾಹೀದ್ ಹುಸೇನ್ 605, ಶಮಿತ್ ಕ್ಯಾಸ್ತಲಿನೋ 604, ಸಮೃದ್ಧ್ 603, ಸಲೋಮಿ ಡಿಸೋಜ 603, ಆರ್ಘ್ಯ ಪಿ. ಜೈನ್ 602, ನಾರಾಯಣಿ ಜಿ. ಕಿಣಿ 601, ಸಾನಿಯಾ ಮೆಹರ್ 600, ಶಾಶ್ವತ್ ಸುರೇಶ್ ಶೆಟ್ಟಿ 598, ರಕ್ಷಿತಾ ಶೆಟ್ಟಿ 597, ಧನುಷ್ ಗಣೇಶ್ ಶೆಟ್ಟಿ 594 ಅಂಕಗಳನ್ನು ಪಡೆದುಕೊಂಡಿದ್ದಾರೆ.

ತಾಲ್ಲೂಕಿನ ದುರ್ಗ ಗ್ರಾಮದ ತೆಳ್ಳಾರು ಸರ್ಕಾರಿ ಪ್ರೌಢಶಾಲೆ ಶೇ. 95.45 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 22 ಮಂದಿ ವಿದ್ಯಾರ್ಥಿಗಳಲ್ಲಿ 21 ಮಂದಿ ಉತ್ತೀರ್ಣರಾಗಿದ್ದು. ಶ್ರೀಯಾ 617 ಅಂಕ ಪಡೆಯುವುದರೊಂದಿಗೆ ಶಾಲೆಗೆ ಪ್ರಥಮ, ಅನ್ಯದಾತು ಸಕೀನ 594 ಅಂಕ ಪಡೆದು ದ್ವಿತೀಯ ಹಾಗೂ ಅನನ್ಯ 598 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಅನಘ ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.