ಬ್ರಹ್ಮಾವರ: ದುಶ್ಚಟಗಳಿಗೆ ಬಲಿಯಾಗದೆ ಸಂಯಮದಿಂದ ಜೀವನ ನಡೆಸಿದರೆ ಸುಖವಾಗಿ ಬದುಕಬಹುದು. ಹೀಗಾಗಿ ಚಟಗಳಿಂದ ದೂರ ಇರಲು ಪ್ರಯತ್ನಿಸಬೇಕು ಎಂದು ಬ್ರಹ್ಮಾವರದ ಆರೋಗ್ಯ ಇಲಾಖೆ ಹಿರಿಯ ಮೇಲ್ವಿಚಾರಕ ಮಂಜುನಾಥ ಅಲಂದೂರು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ಕೋಟ ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಎಚ್ಐವಿ/ಏಡ್ಸ್ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರಾಂಶುಪಾಲ ರಾಜೇಂದ್ರ ಎಸ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ನಿರೀಕ್ಷಕ ಹರಿಶ್ಚಂದ್ರ ವಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ರಮೇಶ ಆಚಾರ್, ಆಂತರಿಕ ಭರವಸೆ ಕೋಶದ ಸಂಚಾಲಕ ಸುಬ್ರಮಣ್ಯ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರಕಾಶ ಕೆ, ಘಟಕದ ನಾಯಕಿ ಸುಪ್ರೀತಾ ಪಾಲ್ಗೊಂಡಿದ್ದರು. ಮೇಘಾ ಸ್ವಾಗತಿಸಿದರು. ಆಶ್ಲೇಷ ವಂದಿಸಿದರು. ತ್ರಿಷಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.