ADVERTISEMENT

ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿನಿ ಅರ್ಚನಾಗೆ ಆರ್ಥಿಕ ನೆರವು

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 6:18 IST
Last Updated 25 ಜನವರಿ 2026, 6:18 IST
ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರ್ಚನಾ ದೇವಾಡಿಗ ಅವರಿಗೆ ಸಹಾಯಧನ ಹಸ್ತಾಂತರಿಸಲಾಯಿತು
ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರ್ಚನಾ ದೇವಾಡಿಗ ಅವರಿಗೆ ಸಹಾಯಧನ ಹಸ್ತಾಂತರಿಸಲಾಯಿತು   

ಕುಂದಾಪುರ: ಇತ್ತೀಚೆಗೆ ಶೆಟ್ರಕಟ್ಟೆಯಲ್ಲಿ ಸಂಭವಿಸಿದ ಬಸ್‌-ಟಿಪ್ಪರ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿ ಅರ್ಚನಾ ದೇವಾಡಿಗ ಅವರ ಕುಟುಂಬಕ್ಕೆ ದೇವಾಡಿಗ ಸಮಾಜ ಸೇವಾ ಸಂಘಟನೆಯ ಪ್ರಮುಖರು ಸಹಾಯಧನವನ್ನು ಹಸ್ತಾಂತರಿಸಿದರು.

ದೇವಾಡಿಗ ಸಮಾಜ ಹಾಗೂ ಇತರ ಮಾನವೀಯ ಹೃದಯವಂತರಿಂದ ಸಂಗ್ರಹಿಸಿದ ₹1.54 ಲಕ್ಷವನ್ನು ಆಕೆಯ ತಾಯಿ ಗಿರಿಜಾ ದೇವಾಡಿ ಅವರಿಗೆ ನೀಡಲಾಯಿತು.

ಸ್ಪಷ್ಟವಾಗಿ ಮಾತನಾಡಲಾಗದ ಸ್ಥಿತಿಯಲ್ಲಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ ಅರ್ಚನಾ ಬಂದಿದ್ದವರಿಗೆ ಕೈ ಸನ್ನೆ ಮೂಲಕ ಸ್ಪಂದಿಸಿದರು.

ADVERTISEMENT

ಆಕೆಯ ಮುಂದುವರೆದ ಚಿಕಿತ್ಸೆಗೆ ಇನ್ನಷ್ಟು ಆರ್ಥಿಕ ನೆರವಿನ ಅಗತ್ಯವಿದೆ. ಅವರ ಕುಟುಂಬಕ್ಕೆ ಮಾನವೀಯ ಹೃದಯವಂತರು ನೆರವು ನೀಡುವಂತೆ ಮನವಿ ಮಾಡಿಕೊಳ್ಳಲಾಯಿತು.

ಕುಂದಾಪುರ, ಬೈಂದೂರು ಹಾಗೂ ಬ್ರಹ್ಮಾವರ ತಾಲ್ಲೂಕು ದೇವಾಡಿಗ ಒಕ್ಕೂಟದ ಅಧ್ಯಕ್ಷ ರಘುರಾಮ ದೇವಾಡಿಗ ಆಲೂರು, ಕಾರ್ಯಾಧ್ಯಕ್ಷ ರಮೇಶ ದೇವಾಡಿಗ ವಂಡ್ಸೆ, ಸಂಚಾಲಕ ಶಂಕರ ಅಂಕದ ಕಟ್ಟೆ, ಪ್ರಧಾನ ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ, ಪ್ರಮುಖರಾದ ಶೀನ ದೇವಾಡಿಗ ಕದಂ ದುಬೈ, ಬಿ.ಆರ್.ದೇವಾಡಿಗ ಬೆಂಗಳೂರು, ನಾರಾಯಣ ದೇವಾಡಿಗ ಕುಂದಾಪುರ, ಚಂದ್ರ ದೇವಾಡಿಗ ಕಟ್ಟಿನಮಕ್ಕಿ, ಮಹಾಲಿಂಗ ದೇವಾಡಿಗ ಬೈಂದೂರು, ಪುರುಷೋತ್ತಮದಾಸ್ ಉಪ್ಪುಂದ, ರವಿ ತಲ್ಲೂರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.