ADVERTISEMENT

ಪರೀಕ್ಷೆಯಲ್ಲಿ ಕಡಿಮೆ ಅಂಕ: ವಿದ್ಯಾರ್ಥಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 5:11 IST
Last Updated 17 ಜನವರಿ 2022, 5:11 IST
ಅನ್ವಿತ್ ಶೆಟ್ಟಿ
ಅನ್ವಿತ್ ಶೆಟ್ಟಿ   

ಪ್ರಜಾವಾಣಿ ವಾರ್ತೆ

ಹೆಬ್ರಿ: ಇಲ್ಲಿನ ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಯೊಂದರಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಅನ್ವಿತ್ ಶೆಟ್ಟಿ(14) ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ಮನನೊಂದು ಮರಣ ಪತ್ರ (ಡೆತ್‌ನೋಟ್‌) ಬರೆದಿಟ್ಟು ನೇಣು ಹಾಕಿಕೊಂಡಿರುವ ಘಟನೆ ಭಾನುವಾರ ನಡೆದಿದೆ.

ಕೆರೆಬೆಟ್ಟು ನಿವಾಸಿ ಸತೀಶ ಶೆಟ್ಟಿ - ಮಮತಾ ಶೆಟ್ಟಿ ದಂಪತಿ ಪುತ್ರ. ಮನೆ ಸ್ನಾನದ ಕೋಣೆ ಕಬ್ಬಿಣದ ರಾಡ್‌ಗೆ ಚೂಡಿದಾರದ ವೇಲ್‌ನಿಂದ ನೇಣು ಹಾಕಿಕೊಂಡಿರುವುದನ್ನು ಕಿಟಕಿಯಿಂದ ನೋಡಿದ ಅನ್ವಿತ್ ಶೆಟ್ಟಿ ಸಹೋದರ ಮನೆಯವರಿಗೆ ಸುದ್ದಿ ತಿಳಿಸಿದ್ದ.

ADVERTISEMENT

ಪೋಷಕರು ಕೂಡಲೇ ಹೆಬ್ರಿ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದು, ಪರೀಕ್ಷೆ ನಡೆಸಿದ ತಂದರು ವೈದ್ಯರು ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.