ADVERTISEMENT

ಕಾರ್ಕಳ: ದೀಪಗಳ ಮಾಲೆಯಲ್ಲಿ ಮಿನುಗಿದ ಪೇಟೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 4:59 IST
Last Updated 26 ಜನವರಿ 2023, 4:59 IST
ಕಾರ್ಕಳ ತಾಲ್ಲೂಕಿನ ಬೈಲೂರಿನಲ್ಲಿ ವಿದ್ಯುದ್ದೀಪಾಲಂಕಾರವನ್ನು ಉದ್ಘಾಟಿಸಿದ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿದರು
ಕಾರ್ಕಳ ತಾಲ್ಲೂಕಿನ ಬೈಲೂರಿನಲ್ಲಿ ವಿದ್ಯುದ್ದೀಪಾಲಂಕಾರವನ್ನು ಉದ್ಘಾಟಿಸಿದ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿದರು   

ಕಾರ್ಕಳ: ತಾಲ್ಲೂಕಿನ ಬೈಲೂರಿನಲ್ಲಿ ನಡೆಯಲಿರುವ ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆಯ ಪೂರ್ವಭಾವಿಯಾಗಿ ವಿದ್ಯುದ್ದೀ
ಪಾಲಂಕಾರದ ಉದ್ಘಾಟನೆಯನ್ನು ಬೈಲೂರು ಮುಖ್ಯಪೇಟೆಯಲ್ಲಿ ಇಂಧನ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ನೆರವೇರಿಸಿದರು.

ಕಾರ್ಕಳ - ಉಡುಪಿ ಮುಖ್ಯ ರಾಜ್ಯಹೆದ್ದಾರಿಯ ನೀರೆಯಿಂದ ಬೈಲೂರು ಜಾರ್ಕಳದ ಬಸ್ರಿಶಾಲೆ, ಜ್ಞಾನಸುಧಾ ಶಿಕ್ಷಣ ಸಂಸ್ಥೆ, ಮುಗ್ಗೆರ್ಕಳ ರಸ್ತೆ , ಕುಕ್ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಡುರಸ್ತೆ ತನಕ ಸುಮಾರು 15 ಕಿ.ಮೀ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬೈಲೂರಿನ ಪೇಟೆ ದೀಪಗಳ ಸರಮಾಲೆ ಕಂಗೊಳಿಸಿತು.

ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಚ್. ಪ್ರಸನ್ನ, ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಉಡುಪಿ ಎಸ್‌ಪಿ ಅಕ್ಷಯ್ ಮಚ್ಚಿಂದ್ರ, ಮೆಸ್ಕಾಂ ಎಂ.ಡಿ ಮಂಜಪ್ಪ, ಬಿಜೆಪಿ ಮುಖಂಡ ಬೋಳ ಪ್ರಭಾಕರ ಕಾಮತ್ ಹಾಗೂ ರಮೇಶ್ ಕಲ್ಲೊಟ್ಟೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.