ಬೈಂದೂರು: ಅಕ್ರಮವಾಗಿ 10 ಜಾನುವಾರಗಳನ್ನು ಮಾಂಸಕ್ಕಾಗಿ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಯಡ್ತರೆ ಜಂಕ್ಷನ್ ಬಳಿ ಬೈಂದೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜಾನುವಾರುಗಳಿದ್ದ ವಾಹನ ಮತ್ತು ಅದಕ್ಕೆ ಬೆಂಗಾವಲಿದ್ದ ಕಾರು ಕೊಲ್ಲೂರು ಕಡೆಯಿಂದ ಭಟ್ಕಳ ಕಡೆಗೆ ತೆರಳುತ್ತಿದ್ದಾಗ ಗುರುವಾರ ನಸುಕಿನ 3.30ಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದರು.
ಪ್ರಕರಣದ ಆರೋಪಿಗಳಾದ ಭಟ್ಕಳ ನವಾಯತ್ ಕಾಲೊನಿಯ ಅಬ್ರಾರುಲ್ ಹಾಕ್ ಮೋಮಿನ್ (30), ಭಟ್ಕಳದ ಗಾಂಧಿ ನಗರ ಕೋಗ್ತಿಯ ಮೊಹಮ್ಮದ್, ಭಟ್ಕಳದ ಮೊಹಮ್ಮದ್ ಆರೀಫ್ ಎಂಬುವರನ್ನು ಬಂಧಿಸಿ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.