ADVERTISEMENT

ಬ್ರಹ್ಮಾವರ | ‘ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸೋಣ’

ತಾಲ್ಲೂಕು ಆಡಳಿತದಿಂದ ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 6:56 IST
Last Updated 16 ಆಗಸ್ಟ್ 2025, 6:56 IST
ವಿವಿಧ ಕ್ಷೇತ್ರಗಳ ಸಾಧಕರಾದ ಅಶೋಕ ಭಟ್ ಚಾಂತಾರು, ಮಂಜುನಾಥ ನಾಯ್ಕ ಪೇತ್ರಿ, ವಿನಯಚಂದ್ರ ಸಾಸ್ತಾನ ಅವರನ್ನು ಸನ್ಮಾನಿಸಲಾಯಿತು
ವಿವಿಧ ಕ್ಷೇತ್ರಗಳ ಸಾಧಕರಾದ ಅಶೋಕ ಭಟ್ ಚಾಂತಾರು, ಮಂಜುನಾಥ ನಾಯ್ಕ ಪೇತ್ರಿ, ವಿನಯಚಂದ್ರ ಸಾಸ್ತಾನ ಅವರನ್ನು ಸನ್ಮಾನಿಸಲಾಯಿತು   

ಬ್ರಹ್ಮಾವರ: ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರಮಟ್ಟದ ನಾಯಕರ ಜತೆಗೆ, ಸ್ಥಳೀಯ ಹೋರಾಟಗಾರರ ಕೊಡುಗೆ ಬಹಳಷ್ಟಿದೆ’ ಎಂದು ಪ್ರಾಧ್ಯಾಪಕ ರಾಮದಾಸ ಪ್ರಭು ಹೇಳಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ತಾಲ್ಲೂಕು ಆಡಳಿತದಿಂದ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಕಾರ್ಯವಾಗಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಜವಾಬ್ದಾರಿ ಹೆಚ್ಚಿದ್ದು, ಎಚ್ಚರಿಕೆ, ಅರಿವಿನಿಂದ ಮುನ್ನಡೆಯೋಣ ಎಂದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್‌ ಶ್ರೀಕಾಂತ ಎಸ್‌, ಹೆಗ್ಡೆ, ಸ್ವಾತಂತ್ರ್ಯಕ್ಕಾಗಿ ಹಿರಿಯರು ಪಟ್ಟ ಶ್ರಮ, ಮಾಡಿದ ತ್ಯಾಗ ಕಿರಿಯರು ಮರೆಯಬಾರದು. ಯುವಜನರು‌ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದರಿಂದ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದರು.

ADVERTISEMENT

ವಿವಿಧ ಕ್ಷೇತ್ರಗಳ ಸಾಧಕರಾದ ಅಶೋಕ ಭಟ್ ಚಾಂತಾರು, ಮಂಜುನಾಥ ನಾಯ್ಕ ಪೇತ್ರಿ, ವಿನಯಚಂದ್ರ ಸಾಸ್ತಾನ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಇಒ ಎಚ್.ವಿ. ಇಬ್ರಾಹಿಂಪುರ್, ಬಿಇಒ ಶಬಾನಾ ಅಂಜುಮ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಡಿ. ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಶಾರದಾ ಪೂಜಾರಿ, ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ಗಳಾದ ಬ್ರಹ್ಮಾವರದ ಅಶೋಕ ಮಾಳಬಾಗಿ, ಕೋಟದ ಪ್ರವೀಣ ಕುಮಾರ್, ಹಿರಿಯಡ್ಕದ ಪುನೀತ್ ಕುಮಾರ್, ವಿಠಲ್ ಮಾಳಾವಡ್ಕರ್ ಭಾಗವಹಿಸಿದ್ದರು. ಶಿಕ್ಷಕ ಶಶಿಧರ ಶೆಟ್ಟಿ ನಂಚಾರು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.