ADVERTISEMENT

ಉಡುಪಿ: ಟಿ.ಮೋಹನದಾಸ್ ಪೈ ನಿಧನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 16:28 IST
Last Updated 31 ಜುಲೈ 2022, 16:28 IST
ಟಿ.ಮೋಹನದಾಸ್ ಪೈ
ಟಿ.ಮೋಹನದಾಸ್ ಪೈ    

ಉಡುಪಿ: ಡಾ.ಟಿಎಂಎ ಪೈ ಪುತ್ರರಾದ ಟಿ.ಮೋಹನದಾಸ್ ಪೈ (89) ಭಾನುವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರಿಗೆ ಸಹೋದರರಾದ ಡಾ.ಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಟಿ.ಅಶೋಕ್ ಪೈ, ಟಿ.ಸತೀಶ್ ಯು.ಪೈ ಹಾಗೂ ಸಹೋದರಿಯರಾದ ವಸಂತಿ ಆರ್.ಶೆಣೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈ ಇದ್ದಾರೆ.

ಡಾ.ಟಿಎಂಎ ಪೈ ಪ್ರತಿಷ್ಠಾನ, ಎಂಜಿಎಂ ಕಾಲೇಜು ಟ್ರಸ್ಟ್, ಮಣಿಪಾಲ್ ಮೀಡಿಯ ನೆಟ್‌ವರ್ಕ್ ಸಂಸ್ಥೆಗಳ ಅಧ್ಯಕ್ಷರಾಗಿ ಹಾಗೂ ಹಲವು ಸಂಸ್ಥೆೆಗಳ ಬೆಳವಣಿಗೆಗೆ ಪೈಗಳು ಶ್ರಮಿಸಿದ್ದರು. ಕೆನರಾ ಲ್ಯಾಂಡ್ ಇನ್‌ವೆಸ್ಟ್‌ಮೆಂಟ್‌ ಜನರಲ್ ಮ್ಯಾನೆಜರ್, ಮಣಿಪಾಲ್ ಪವರ್ ಪ್ರೆಸ್‌ನ ಆಡಳಿತ ಪಾಲುದಾರರಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದರು.

ADVERTISEMENT

ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ (ಐಎನ್‌ಎಸ್) ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿಯೂ ಎರಡು ಅವಧಿ ಸೇವೆ ಸಲ್ಲಿಸಿದ್ದರು. 1989ರಲ್ಲಿ ಐಸಿಡಿಎಸ್‌ನ ಜಂಟಿ ಆಡಳಿತ ನಿರ್ದೇಶಕರಾಗಿ, 1995ರಲ್ಲಿ ಆಡಳಿತ ನಿರ್ದೇಶಕರಾಗಿ ನಂತರ ಚೇರ್ಮನ್‌ ಹುದ್ದೆಗೇರಿದ್ದರು.

ಆ.1ರಂದು ಬೆಳಿಗ್ಗೆೆ 9ರಿಂದ 11ರವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಡಾ.ಟಿ.ಮೋಹನದಾಸ್‌ ಪೈ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆೆ ಇಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.