ADVERTISEMENT

ಉಡುಪಿ : ಡಯಾಲಿಸಿಸ್‌ ಕೇಂದ್ರದ ಅವ್ಯವಸ್ಥೆ; ರೋಗಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಮೇ 2023, 15:35 IST
Last Updated 29 ಮೇ 2023, 15:35 IST
ಉಡುಪಿ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಅವ್ಯವಸ್ಥೆ ಇದೆ ಎಂದು ಆರೋಪಿಸಿ ರೋಗಿಗಳು ಸೋಮವಾರ ಆಸ್ಪತ್ರೆಯ ಎದುರು ದಿಢೀರ್ ಪ್ರತಿಭಟನೆ ಮಾಡಿದರು.
ಉಡುಪಿ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಅವ್ಯವಸ್ಥೆ ಇದೆ ಎಂದು ಆರೋಪಿಸಿ ರೋಗಿಗಳು ಸೋಮವಾರ ಆಸ್ಪತ್ರೆಯ ಎದುರು ದಿಢೀರ್ ಪ್ರತಿಭಟನೆ ಮಾಡಿದರು.   

ಉಡುಪಿ: ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಅವ್ಯವಸ್ಥೆ ಇದೆ ಎಂದು ಆರೋಪಿಸಿ ರೋಗಿಗಳು ಸೋಮವಾರ ಆಸ್ಪತ್ರೆಯ ಎದುರು ದಿಢೀರ್ ಪ್ರತಿಭಟನೆ ಮಾಡಿದರು.

ಡಯಾಲಿಸಿಸ್ ಕೇಂದ್ರವನ್ನು ಗುತ್ತಿಗೆ ಪಡೆದಿರುವ ಎಸ್ಕಗ್ ಸಂಜೀವಿನಿ ಸಂಸ್ಥೆಯ ನಿರ್ವಹಣೆ ಕೊರತೆಯಿಂದ ಕೇಂದ್ರದಿಂದ ವ್ಯವಸ್ಥಿತವಾಗಿ ಡಯಾಲಿಸಿಸ್ ನಡೆಯುತ್ತಿಲ್ಲ. 14 ಡಯಾಲಿಸಿಸ್ ಯಂತ್ರಗಳ ಪೈಕಿ ಪ್ರಸ್ತುತ ಏಳು ಯಂತ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಉಳಿದವು ಹಾಳಾಗಿವೆ ಎಂದು ಆರೋಪಿಸಿದರು.

ಕೆಟ್ಟ ಡಯಾಲಿಸಿಸ್‌ ಯಂತ್ರಗಳನ್ನು ದುರಸ್ತಿ ಮಾಡಿಸದ ಪರಿಣಾಮ ರೋಗಿಗಳಿಗೆ ತೊಂದರೆಯಾಗಿದೆ. ಕೇಂದ್ರದಲ್ಲಿ 60 ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಅವ್ಯವಸ್ಥೆ ಸರಿಪಡಿಸಬೇಕು ಎಂದು ರೋಗಿಗಳು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.