ADVERTISEMENT

ಉಡುಪಿ: ಮನೆ ಬಾಗಿಲಿಗೆ ಸರ್ಕಾರದ ಸೇವೆ

ಜಿಲ್ಲಾಡಳಿತದಿಂದ ಸಹಾಯವಾಣಿ ಕೇಂದ್ರ ಆರಂಭ:

ಪ್ರಜಾವಾಣಿ ವಿಶೇಷ
Published 10 ಜೂನ್ 2020, 13:36 IST
Last Updated 10 ಜೂನ್ 2020, 13:36 IST
ಜಿ.ಜಗದೀಶ್
ಜಿ.ಜಗದೀಶ್   

ಉಡುಪಿ: ಸಾರ್ವಜನಿಕರು ಅಗತ್ಯದ ಕೆಲಸ ಕಾರ್ಯಗಳಿಗೆ ಜಿಲ್ಲಾಧಿಕಾರಿ ಕಚೇರಿಗೆ ಬರುವುದು ಬೇಡ. ಮನೆಯಲ್ಲಿ ಕುಳಿತು ಸರ್ಕಾರದ ಸೇವೆಗಳನ್ನು ಪಡೆಯಬಹುದು. ಇದಕ್ಕಾಗಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.‌

ಕೋವಿಡ್‌ ಸೋಂಕು ಹರಡುವಿಕೆ ತಡೆಗೆ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಡಳಿತದ ಕಾರ್ಯವೈಖರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಭೇಟಿನೀಡುವ ಬದಲು ಮೊಬೈಲ್‌ ಮೂಲಕವೇ ಕೆಲಸಗಳನ್ನು ತ್ವರಿತವಾಗಿ ಮಾಡಿಸಿಕೊಳ್ಳಬಹುದು ಎಂದರು.

2 ಹೆಲ್ಪ್‌ಲೈನ್‌ ನಂಬರ್:

ADVERTISEMENT

ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಯ 0820–2574931, 2571500 ಸಹಾಯವಾಣಿಗೆ ಕರೆಮಾಡಿ ಆಗಬೇಕಾದ ಕೆಲಸದ ಬಗ್ಗೆ ಮಾಹಿತಿ ನೀಡಬೇಕು. ದಾಖಲಾತಿ ಪಡೆಯಲು ಅರ್ಜಿ ಸಲ್ಲಿಸಿದ್ದರೆ ಅದರ ಸ್ಥಿತಿಯ ವಿವರ ಪಡೆಯಬಹುದು.

ಇದಕ್ಕಾಗಿ ಸಹಾಯವಾಣಿ ಕೇಂದ್ರದಲ್ಲಿ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರ ಅಹವಾಲುಗಳನ್ನು ಮೊಬೈಲ್‌ ಸಂಖ್ಯೆಯ ಸಮೇತ ಸ್ವೀಕರಿಸುವ ಸಿಬ್ಬಂದಿ, ಸಂಬಂಧಪಟ್ಟ ಇಲಾಖೆಗೆ ಮುಟ್ಟಿಸಲಿದ್ದಾರೆ. ಕೆಲಸ ಆದ ಕೂಡಲೇ ಕರೆ ಮಾಡಿ ಅರ್ಜಿದಾರರಿಗೆ ತಿಳಿಸಲಿದ್ದಾರೆ ಎಂದರು.

ದಾಖಲೆಗಳನ್ನು ಪಡೆಯಲು ಪೂರಕ ಮಾಹಿತಿ ಒದಗಿಸಲು ಪ್ರತ್ಯೇಕ ವಾಟ್ಸ್‌ ಆ್ಯಪ್ ಸಂಖ್ಯೆ 9880831516 ಇದ್ದು ಇಲ್ಲಿಗೆ ಕಳಿಸಬಹುದು. udupidc.helpline@gmail.com ಗೆ ಮೇಲ್ ಮೂಲಕವೂ ಸೇವೆ ಪಡೆಯಬಹುದು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಹೆಚ್ಚು ಕಂಟೈನ್‌ಮೆಂಟ್‌ ಝೋನ್‌ಗಳಿದ್ದು, ಸೋಂಕು ಹರಡುವಿಕೆ ತಡೆಗೆ ಪ್ರಾಯೋಗಿಕವಾಗಿ ಹೊಸ ಪ್ರಯತ್ನ ಮಾಡಲಾಗಿದೆ. ಅತಿಅಗತ್ಯ ಸಂದರ್ಭದಲ್ಲಿ ಖುದ್ದು ಭೇಟಿ ಮಾಡಬೇಕಿದ್ದರೆ ಮಾತ್ರ ಕಚೇರಿಗೆ ಬರಬಹುದು. ‘ರೋಗದ ಲಕ್ಷಣ ಇರುವವರಿಗೆ ಪ್ರವೇಶವಿಲ್ಲ’ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.