ADVERTISEMENT

ಇಂಡಿಕಾ ಸಂಭ್ರಮ: ರಮೇಶ್‌ಗೆ ಪ್ರಶಸ್ತಿ ಪ್ರದಾನ

BRAHAMAVARA

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 4:37 IST
Last Updated 31 ಜನವರಿ 2023, 4:37 IST
ಕೋಟ ಮಣೂರು ಪಡುಕೆರೆ ಇಂಡಿಕಾ ಕಲಾ ಬಳಗದ ಇಂಡಿಕಾ ಸಂಭ್ರಮ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಬೆಲ್ತೂರು ರಮೇಶ್ ಅವರಿಗೆ ಮೊಳಹಳ್ಳಿ ಹೆರಿಯ ನಾಯ್ಕ ಇಂಡಿಕಾ ಪುರಸ್ಕಾರ ಪ್ರದಾನ ಮಾಡಲಾಯಿತು
ಕೋಟ ಮಣೂರು ಪಡುಕೆರೆ ಇಂಡಿಕಾ ಕಲಾ ಬಳಗದ ಇಂಡಿಕಾ ಸಂಭ್ರಮ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಬೆಲ್ತೂರು ರಮೇಶ್ ಅವರಿಗೆ ಮೊಳಹಳ್ಳಿ ಹೆರಿಯ ನಾಯ್ಕ ಇಂಡಿಕಾ ಪುರಸ್ಕಾರ ಪ್ರದಾನ ಮಾಡಲಾಯಿತು   

ಕೋಟ (ಬ್ರಹ್ಮಾವರ): ಸಂಘಸಂಸ್ಥೆಗಳು, ಕಲಾವಿದರನ್ನು ಸ್ಮರಿಸುವ ಕಾರ್ಯ ಶ್ಲಾಘನೀಯ ಎಂದು ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು.

ಕೋಟ ಮಣೂರು ಪಡುಕೆರೆ ಇಂಡಿಕಾ ಕಲಾ ಬಳಗದ ಇಂಡಿಕಾ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಕ್ಷಗಾನ ಕಲಾವಿದ ಬೆಲ್ತೂರು ರಮೇಶ್ ಅವರಿಗೆ ಮೊಳಹಳ್ಳಿ ಹೆರಿಯ ನಾಯ್ಕ ಇಂಡಿಕಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಸಮಾಜಸೇವಕ ಈಶ್ವರ್ ಮಲ್ಪೆ ಅವರನ್ನು ಗೌರವಿಸಲಾಯಿತು. ಡ್ರಾಮಾ ಜೂನಿಯರ್ ಖ್ಯಾತಿಯ ಸಮೃದ್ಧಿ ಕುಂದಾಪುರ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇಂಡಿಕಾ ಕಲಾ ಬಳಗದ ಗೌರವ ಸಲಹೆಗಾರ ಎಂ.ಜಯರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಯಕ್ಷ ವಿಮರ್ಶಕ ಪ್ರೋ.ಎಸ್.ವಿ ಉದಯ್ ಕುಮಾರ್ ಶೆಟ್ಟಿ ಹೆರಿಯ ನಾಯ್ಕ ಅವರ ಮತ್ತು ಮನೋವೈದ್ಯ ಡಾ. ಪ್ರಕಾಶ್ ತೋಳಾರ್ ರಾಮನಾಯರಿ ಅವರ ಕುರಿತು ಸಂಸ್ಮರಣೆ ಮಾಡಿದರು. ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಟ್ರಸ್ಟಿ ಗೋಪಾಲಕೃಷ್ಣ ನಾಡಾ, ಗ್ರಾಮದ ಹಿರಿಯ ನಾಗರಿಕ ದಾರೋಜ್ಜಿ ಮನೆಯ ಆನಂದ ಕಾಂಚನ್, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಉದ್ಯಮಿ ದಿನೇಶ್ ಪಡುಕರೆ, ನ್ಯಾಯವಾದಿ ಟಿ.ಮಂಜುನಾಥ ಗಿಳಿಯಾರ್, ಇಂಡಿಕಾ ಕಲಾಬಳಗದ ಅಧ್ಯಕ್ಷ ಸಂತೋಷ್ ತಿಂಗಳಾಯ ಇದ್ದರು.

ಬಳಗದ ಪ್ರಭಾಕರ್ ಸ್ವಾಗತಿಸಿದರು. ಬಳಗದ ಸಂತೋಷ್ ಕುಮಾರ್ ಕೋಟ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.