ADVERTISEMENT

ಚೀನಾ-ಪಾಕ್ ಯುದ್ಧದಲ್ಲಿ ಭಾಗಿಯಾಗಿದ್ದ ಉಡುಪಿಯ ಮಾಜಿ ಕರ್ನಲ್ ರಾಮಚಂದ್ರ ರಾವ್ ನಿಧನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 6:28 IST
Last Updated 15 ಜೂನ್ 2021, 6:28 IST
ಮಾಜಿ ಕರ್ನಲ್ ರಾಮಚಂದ್ರ ರಾವ್
ಮಾಜಿ ಕರ್ನಲ್ ರಾಮಚಂದ್ರ ರಾವ್    

ಉಡುಪಿ: ಮಾಜಿ ಕರ್ನಲ್ ರಾಮಚಂದ್ರ ರಾವ್ (88)ಸೋಮವಾರ ರಾತ್ರಿ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ.

ಭೂಸೇನೆಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ರಾಮಚಂದ್ರ ರಾವ್ ಚೀನಾ ಯುದ್ಧ, ಪಾಕಿಸ್ತಾನ ಯುದ್ಧ ಹಾಗೂ ಬಾಂಗ್ಲಾ ವಿಮೋಚನೆಯ ಕಾರ್ಯಾಚರಣೆಯಲ್ಲಿದ್ದರು.

1960ರಲ್ಲಿ ಸೇನೆ ಸೇರಿದ ರಾಮಚಂದ್ರ ರಾವ್ 1963ರಲ್ಲಿ ಕ್ಯಾಪ್ಟನ್, ನಂತರ ಮೇಜರ್, ಲೆಫ್ಟಿನಿಂಟ್ ಕರ್ನಲ್, ಕರ್ನಲ್ ಹುದ್ದೆಗೇರಿದ್ದರು.

ADVERTISEMENT

29 ವರ್ಷ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯ ಬಳಿಕ ಉಡುಪಿಯ ಬಡಾನಿಡಿಯೂರಿನಲ್ಲಿ ನೆಲೆಸಿದ್ದರು. ಉಡುಪಿಯಲ್ಲಿ ಮಾಜಿ ಸೈನಿಕರ ವೇದಿಕೆ, ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯಲ್ಲಿ ಕಾರ್ಯ, ಶ್ರೀಕೃಷ್ಣ ಬಾಲನಿಕೇತನ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.

‘ನವೀನ್ ಪೇಜಾವರ ಟ್ರಸ್ಟ್’ ಮೂಲಕ ಬಡವರಿಗೆ ನೆರವು ನೀಡುತ್ತಿದ್ದರು. 2017ರಲ್ಲಿ ಯಕ್ಷಗಾನ ಕಲಾರಂಗ ಎಸ್.ಗೋಪಾಲಕೃಷ್ಣರ ಸಂಸ್ಮರಣಾ ‘ಸೇವಾಭೂಷಣ ಪ್ರಶಸ್ತಿ’ ನೀಡಿ ಗೌರವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.