ADVERTISEMENT

ಯಕ್ಷ ಟ್ರೋಫಿ: ಯಕ್ಷಗಾನ ಕಲಾವಿದರ ಕೈಯಲ್ಲಿ ಕ್ರಿಕೆಟ್ ಬ್ಯಾಟ್– ಬಾಲ್ I

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 12:52 IST
Last Updated 31 ಮಾರ್ಚ್ 2023, 12:52 IST

ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ಅಚ್ಲಾಡಿಯ ಸನ್‌ ಶೈನ್ ಕ್ರೀಡಾಂಗಣದಲ್ಲಿ ಬಡಗುತಿಟ್ಟಿನ 9 ಯಕ್ಷಗಾನ ಮೇಳಗಳ ಸಮಾಗಮ ನಡೆಯಿತು. ಪ್ರಧಾನ ಭಾಗವತರು, ಸ್ತ್ರೀವೇಷಧಾರಿಗಳು, ಹಾಸ್ಯ ಕಲಾವಿದರು, ಹಿಮ್ಮೇಳದವರು ಹೀಗೆ, ಯಕ್ಷಲೋಕವೇ ಒಂದೆಡೆ ನೆರೆದಿತ್ತು. ರಂಗದ ಮೇಲೆ ಅಬ್ಬರಿಸುತ್ತಿದ್ದ ಕಲಾವಿದರೆಲ್ಲ ಮೈದಾನದಲ್ಲಿ ಬ್ಯಾಟ್‌ ಹಿಡಿದು ಆರ್ಭಟಿಸಿ ರನ್‌ ಮಳೆ ಸುರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.