ಕಾಪು (ಪಡುಬಿದ್ರಿ): ಸಾಯಿ ಈಶ್ವರ್ ಗುರೂಜಿ ಅವರು ಮಜೂರು ಉಳಿಯಾರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದರು.
‘ಧರ್ಮ, ರಾಷ್ಟ್ರ, ಯೋಧರು ಮತ್ತು ಅವರ ಕುಟುಂಬ ರಕ್ಷಣೆ ಹಿಂದೂಗಳ ಒಗ್ಗಟ್ಟು’ ಎಂಬ ಸಂಕಲ್ಪದೊಂದಿಗೆ ಶ್ರೀಕೃಷ್ಣ ಜನ್ಮಭೂಮಿಯ ಮುಕ್ತಿಗಾಗಿ 108 ದಿನ 108 ಮಠ, ಮಂದಿರಗಳಿಗೆ ಭೇಟಿಯ 2ನೇ ವರ್ಷದ ‘ಸತ್ಯ ಧರ್ಮದ ನಾಡಿನಲ್ಲಿ ಜ್ಞಾನದ ನಡೆ’ ಸಂಕಲ್ಪದಂತೆ ಅವರು ಭೇಟಿ ನೀಡಿದರು.
ಅರ್ಚಕರಾದ ಲಕ್ಷ್ಮೀಶ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವಿ ಉಪಾಧ್ಯಾಯ, ಜನಾರ್ದನ್ ಆಚಾರ್ಯ, ಭಜನಾ ಮಂಡಳಿ ಪ್ರಮುಖರಾದ ಸುಧಾಕರ ಆಚಾರ್ಯ, ಶ್ರೀಕಾಂತ್ ಸನಿಲ್, ದುರ್ಗಾಪ್ರಸಾದ್, ಸುನಿತಾ ಲಕ್ಷ್ಮೀಶ, ಯೋಗೀಶ್ ಆಚಾರ್ಯ, ನಿತೇಶ್ ಆಚಾರ್ಯ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.