ADVERTISEMENT

ಉಡುಪಿ|ಎಂಜಿಎಂ ಕಾಲೇಜಿನಲ್ಲಿ ವಿ.ವಿ. ಮಟ್ಟದ ಅಂತರ್ ಕಾಲೇಜು ರಸಪ್ರಶ್ನೆ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 13 ಮೇ 2025, 10:37 IST
Last Updated 13 ಮೇ 2025, 10:37 IST
ವಿಜೇತರಿಗೆ ಬಹುಮಾನ ವಿತರಿಸಲಾಯಿತು
ವಿಜೇತರಿಗೆ ಬಹುಮಾನ ವಿತರಿಸಲಾಯಿತು   

ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್ (ಎಂಜಿಎಂ) ಸಂಧ್ಯಾ ಕಾಲೇಜಿನಲ್ಲಿ ಈಚೆಗೆ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು.

ವಿಶ್ವವಿದ್ಯಾನಿಲಯದ ವ್ಯಾಪ್ತಿಯ ವಿವಿಧ ಕಾಲೇಜುಗಳಿಂದ 25 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಚಾರ್ಯ ದೇವೀದಾಸ ಎಸ್. ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆ ನಿರ್ವಹಿಸಿದ ಪ್ರಾಧ್ಯಾಪಕ ಪ್ರಭಾಕರ್ ಶಾಸ್ತ್ರಿ ಮತ್ತು ರೋಹಿಣಿ ಅವರನ್ನು ಗೌರವಿಸಲಾಯಿತು.

ADVERTISEMENT

ಮಲ್ಲಿಕಾ ಎ. ಶೆಟ್ಟಿ ಇದ್ದರು. ವಾಣಿಜ್ಯಶಾಸ್ತ್ರದ ಉಪನ್ಯಾಸಕ ಚಂದನ್ ಕುಮಾರ್ ಸ್ವಾಗತಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ವರ್ಷಿಣಿ ಕೋಟ್ಯಾನ್ ನಿರೂಪಿಸಿದರು.

ಬಹುಮಾನ ವಿಜೇತರು:

ಮಂಗಳೂರಿನ ಸೇಂಟ್ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಸಂಕೇತ್ ಆಳ್ವಾ ಮತ್ತು ಮಾರ್ಕ್ ಪ್ರಭು (₹5 ಸಾವಿರ), ಚಿರಾಗ್ ಜೆ. ಸುನಿಲ್ ಮತ್ತು ಎಲ್ವಿಸ್ ಫ್ರಾಂಕ್ಲಿನ್ ಲೋಬೊ (₹3 ಸಾವಿರ), ಕಟಪಾಡಿಯ ತೃಷಾ ವಿದ್ಯಾ ಕಾಲೇಜಿನ ಪ್ರಸನ್ನ ರಾಜೇಶ್ ಕಲಾವರ್ ಮತ್ತು ಇಫ್ಹಾಮ್ ಅಹಮ್ಮದ್ ಇರ್ಷಾದ್ (₹2 ಸಾವಿರ), ಅಲ್ಲದೆ, ಮೂರು ತಂಡಗಳಿಗೆ ಪ್ರೋತ್ಸಾಹಕ ಬಹುಮಾನವಾಗಿ ತಲಾ ₹1 ಸಾವಿರ ನಗದು ಬಹುಮಾನ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.