ಮೊಬೈಲ್
ಬ್ರಹ್ಮಾವರ: ಇಲ್ಲಿನ ರುಡ್‌ಸೆಟ್ ಸಂಸ್ಥೆಯಲ್ಲಿ ವಿವಿಧ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಮೊಬೈಲ್ ರಿಪೇರಿ ಮತ್ತು ಸರ್ವಿಸ್ ತರಬೇತಿ, ಟಿ.ವಿ. ರಿಪೇರಿ ಮತ್ತು ಸರ್ವಿಸ್ ತರಬೇತಿ ಇದೇ 29ರಿಂದ ನ. 27ರವರೆಗೆ, ಹಪ್ಪಳ ಉಪ್ಪಿನಕಾಯಿ ಮತ್ತು ಮಸಾಲಾ ಪೌಡರ್ ತಯಾರಿಕೆ ತರಬೇತಿ ನ. 5ರಿಂದ 24ರವರೆಗೆ, ಎಲೆಕ್ಟ್ರಿಕಲ್ ಮೋಟಾರ್ ರಿವೈಂಡ್ ರಿಪೇರಿ ಮತ್ತು ಸರ್ವಿಸ್ ತರಬೇತಿ ನ. 17ರಿಂದ ಡಿ. 12ರವರೆಗೆ, ಜೇನು ಸಾಕಾಣಿಕೆ ತರಬೇತಿ ನ. 27ರಿಂದ ಡಿ. 17ರವರೆಗೆ ನಡೆಯಲಿದೆ.
ಉಚಿತ ಊಟ, ವಸತಿ, ಸಮವಸ್ತ್ರ, ತರಬೇತಿ ಕಿಟ್ ನೀಡಲಾಗುವುದು. ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ– ಯುವತಿಯರಿಗೆ ಮೊದಲ ಆದ್ಯತೆ. ಆಸಕ್ತರು ಗ್ರಾಮೀಣ ಭಾಗದವರಾಗಿದ್ದು, 18ರಿಂದ 45 ವರ್ಷ ವಯಸ್ಸಿನವರಾಗಿಬೇಕು. ಬಿ.ಪಿ.ಎಲ್. ಕುಟುಂಬದ ಸದಸ್ಯರಾಗಿರಬೇಕು. ಕನ್ನಡ ಓದಲು ಬರೆಯಲು ಬರಬೇಕು. ಮುಂದೆ ಇದನ್ನೇ ವೃತ್ತಿಯನ್ನಾಗಿ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದು.
ಹೆಸರು, ವಿಳಾಸ, ವಾಟ್ಸ್‌ಆ್ಯಪ್ ಮೊಬೈಲ್ ನಂಬರ್, ಪಡೆಯಲು ಇಚ್ಚಿಸುವ ತರಬೇತಿ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಪ್ರತಿ ಲಗತ್ತಿಸಿ ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ 576213 ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಅಥವಾ 9844086383 ವಾಟ್ಸ್‌ಆ್ಯಪ್ ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.