ಕುಂದಾಪುರ: ಯುಎಚ್‌ವಿ (ಸಾಮೂಹಿಕ ಮಾನವ ಮೌಲ್ಯ) ಕಾರ್ಯಕ್ರಮ ಭಾಗವಾಗಿ ಮೂಡ್ಲಕಟ್ಟೆಯ ಎಂಐಟಿ ಕುಂದಾಪುರದ ದ್ವಿತೀಯ ವರ್ಷದ ಸಿಎಸ್ಇ ಡೇಟಾ ಸೈನ್ಸ್ ವಿದ್ಯಾರ್ಥಿಗಳು ಡಿವೈನ್ ಪಾರ್ಕ್, ಸ್ಪಂದನ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದರು.
ಡಿವೈನ್ ಪಾರ್ಕ್‌ನಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನೋದಯದ ಅನುಭವ, ಯೋಗದ ಮಹತ್ವ, ಉದ್ಯಾನವ ನೀಡುವ ಮೌಲ್ಯಗಳ ಬಗ್ಗೆ ಮನವರಿಕೆ ಮಾಡಲಾಯಿತು.
ಬಳಿಕ ವಿದ್ಯಾರ್ಥಿಗಳು ಬ್ರಹ್ಮಾವರದ ಉಪ್ಪೂರಿನಲ್ಲಿರುವ ಸ್ಪಂದನ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದರು. ಅನುಭವ ಹಂಚಿಕೊಂಡ ವಿದ್ಯಾರ್ಥಿಗಳು, ‘ಅಲ್ಲಿನ ಮುಗ್ಧ, ಸುಂದರ ಆತ್ಮಗಳನ್ನು ಭೇಟಿಯಾಗಿರುವುದು ಅವಿಸ್ಮರಣೀಯ ಅನುಭವ. ಮಾನಸಿಕ ಸವಾಲುಗಳ ಹೊರತಾಗಿಯೂ ಅವರ ಸೃಜನಶೀಲತೆ ಬೆರಗುಗೊಳಿಸಿದೆ’ ಎಂದರು.
ಪ್ರಾಧ್ಯಾಪಕಿ ಫರ್‍ಹಾನಾ ಇಮ್ರಾನ್ ಕಾರ್ಯಕ್ರಮ ಸಂಯೋಜಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.