
ಬ್ರಹ್ಮಾವರ: ಶಿರಿಯಾರ ಕಲ್ಮರ್ಗಿ ಶ್ರೀರಾಮ ಮಂದಿರದಿಂದ ಭಾನುವಾರ ಸಂಕೀರ್ತನಾ ಪಾದಯಾತ್ರೆಗೆ, ಸಾಮಾಜಿಕ ಕಾರ್ಯಕರ್ತ ರಾಮಾಂಜನೇಯ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶಿರಿಯಾರ ಕಲ್ಮರ್ಗಿ ಪ್ರಭಾಕರ ನಾಯಕ್ ವ್ಯಾಸ ಧ್ವಜಕ್ಕೆ ಹಾರ ಹಾಕಿ, ಭಜನೆ ಮೂಲಕ ಚಾಲನೆ ನೀಡಿದರು.
ಕೋಟ ಹೋಬಳಿ ವ್ಯಾಪ್ತಿಯ ಶಿರಿಯಾರ ಕಲ್ಮರ್ಗಿ ಶ್ರೀರಾಮ ಮಂದಿರದಿಂದ ಆರಂಭಗೊಂಡು ತಾಂಗಾಡಿ, ಎತ್ತಿನಟ್ಟಿ, ಸಾಹೇಬರಕಟ್ಟೆ, ಗಿರಿಕೆಮಠ, ಮಧುವನ, ವಡ್ಡರ್ಸೆ ಮಾರ್ಗವಾಗಿ ಕೋಟ ಮೂರುಕ್ಕೆ ಮೂಲಕ ಚೇಂಪಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ತಲುಪಿತು.
ರಾಮಾಂಜನೇಯ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ರವೀಂದ್ರ ಹೆಗ್ಡೆ, ಕೋಶಾಧಿಕಾರಿ ದಾಮೋದರ್ ನಾಯಕ್ ಕಲ್ಮರ್ಗಿ, ಜಿಎಸ್‌ಬಿ ಮುಖಂಡರಾದ ಶಿವಾನಂದ, ಪ್ರಖ್ಯಾತ್, ಪ್ರಕಾಶ್, ನಿತ್ಯಾನಂದ ಇದ್ದರು.
ಚೇಂಪಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವೇದಮೂರ್ತಿ ಅನಂತ ಭಟ್ ಅವರು, ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಗುರುವಂದನೆ ಸಲ್ಲಿಸಿ ಪ್ರಸಾದ ವಿತರಿಸಿದರು.
ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಜನ್ಮ ಶತಮಾನೋತ್ಸವ, ಮಂಗಲೋತ್ಸವ ಪ್ರಯುಕ್ತ ವ್ಯಾಸ ಧ್ವಜ ಸಂಕೀರ್ತನಾ ಪಾದಯಾತ್ರೆ ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.