ADVERTISEMENT

ಮೇ 18ರಂದು ಗೋದಾಮು, ವಸತಿ ಸಂಕೀರ್ಣ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 13:37 IST
Last Updated 15 ಮೇ 2025, 13:37 IST
ಕೋಟ ಸಿ.ಎ ಬ್ಯಾಂಕ್‌ನ ಮಣೂರು ಶಾಖಾ ವಠಾರದ ಹೊರನೋಟ
ಕೋಟ ಸಿ.ಎ ಬ್ಯಾಂಕ್‌ನ ಮಣೂರು ಶಾಖಾ ವಠಾರದ ಹೊರನೋಟ   

ಕೋಟ(ಬ್ರಹ್ಮಾವರ): ಕೋಟ ಸಹಕಾರಿ ವ್ಯವಸಾಯಕ ಸಂಘದ ಮಣೂರು ಶಾಖೆಯ ನೂತನ ಶಾಖಾ ಕಟ್ಟಡ, ಗೋದಾಮು ಮತ್ತು ವಸತಿ ಸಂಕೀರ್ಣ ಲೋಕಾರ್ಪಣೆ ಸಮಾರಂಭ ಮೇ 18ರಂದು ಬೆಳಿಗ್ಗೆ 10ಗಂಟೆಗೆ ಸಂಘದ ಮಣೂರು ಶಾಖಾ ವಠಾರದಲ್ಲಿ ನಡೆಯಲಿದೆ.

ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಅಧ್ಯಕ್ಷತೆ ವಹಿಸಿಲಿದ್ದು, ಕಟ್ಟಡವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್‌ ರಾಜೇಂದ್ರಕುಮಾರ್ ಉದ್ಘಾಟಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಭದ್ರತಾ ಕೊಠಡಿ, ಕುಂದಾಪುರ ಶಾಸಕ ಕಿರಣ್‌ ಕುಮಾರ್‌ ಅವರು ಕೊಡ್ಗಿ ಗೋದಾಮು ಕಟ್ಟಡ, ಮುಖಂಡ ಜಯಪ್ರಕಾಶ ಹೆಗ್ಡೆ ಅವರು ವಾಣಿಜ್ಯ ಸಂಕೀರ್ಣ ಉದ್ಘಾಟಿಸುವರು.

ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, ಸಹಕಾರ ರಶ್ಮಿ ನಗದು ಪತ್ರ ಬಿಡುಗಡೆಗೊಳಿಸುವರು. ಭದ್ರತಾ ಕೋಶವನ್ನು ರೋಟರಿ ವಲಯ 2ರ ಆರ್‌ಪಿಐಸಿ ಮತ್ತು ಜಿಲ್ಲಾ ಸಲಹೆಗಾರ ಪಿ.ಡಿ.ಜಿ ಅಭಿನಂದನ್ ಎ. ಶೆಟ್ಟಿ, ಕೃಷಿ ಉತ್ಪನ್ನ ದಾಸ್ತಾನು ಮಳಿಗೆಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಬೆಳಪು ದೇವಿಪ್ರಸಾದ ಶೆಟ್ಟಿ, ಸಭಾಭವನವನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಪಡಿತರ ವಿಭಾಗವನ್ನು ಕುಂದಾಪುರ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಗಣಕ ಯಂತ್ರವನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಮಹೇಶ ಹೆಗ್ಡೆ ಮೊಳಹಳ್ಳಿ ಉದ್ಘಾಟಿಸುವರು.

ADVERTISEMENT

ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್., ನವೋದಯ ಸಮೃದ್ಧಿ ಸ್ವಸಹಾಯ ಸಂಘಗಳಿಗೆ ಸುತ್ತುನಿಧಿ ಹಸ್ತಾಂತರಿಸುವರು. ವಸತಿ ಸಂಕೀರ್ಣವನ್ನು ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಸುಕನ್ಯಾ ಉದ್ಘಾಟಿಸಲಿದ್ದು, ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಫಲಾನುಭವಿಗಳಿಗೆ ಚೆಕ್ ಹಸ್ತಾಂತರಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.