ADVERTISEMENT

ಉಡುಪಿ | ಯಕ್ಷಗಾನ ಕಲಾವಿದ ರಾಜೇಂದ್ರ ಗಾಣಿಗ ನಿಧನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 15:00 IST
Last Updated 21 ಸೆಪ್ಟೆಂಬರ್ 2023, 15:00 IST
<div class="paragraphs"><p>ರಾಜೇಂದ್ರ ಗಾಣಿಗ</p></div>

ರಾಜೇಂದ್ರ ಗಾಣಿಗ

   

ಉಡುಪಿ: ಎರಡೂವರೆ ದಶಕಗಳ ಕಾಲ ವಿವಿಧ ಮೇಳಗಳಲ್ಲಿ ಯಕ್ಷಗಾನ ಕಲಾವಿದರಾಗಿ ಕಲಾಸೇವೆ ಮಾಡಿದ್ದ ಯುವ ಕಲಾವಿದ ಹೆರಂಜಾಲು ರಾಜೇಂದ್ರ ಗಾಣಿಗ (41) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.

ಮಾರಣಕಟ್ಟೆ, ಹಾಲಾಡಿ, ಸೌಕೂರು, ನೀಲಾವರ ಹಾಗೂ ಮಂದಾರ್ತಿ ಮೇಳದಲ್ಲಿ ಪುರುಷ ವೇಷಧಾರಿಯಾಗಿ ಪ್ರದರ್ಶನ ನೀಡಿದ್ದರು. ಅವಿವಾಹಿತರಾಗಿದ್ದ ರಾಜೇಂದ್ರ ಗಾಣಿಗ ಅವರಿಗೆ ತಾಯಿ ಇದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.