ಉಡುಪಿ: ಬಡಗುತಿಟ್ಟಿನ ‘ಯಾರೆ ನೀನು ಭುವನ ಮೋಹಿನಿ’ ಹಾಡಿಗೆ ಯಕ್ಷಗಾನ ಸ್ಟೆಪ್ ಹಾಕಿರುವ ಕಡೆಕಾರಿನ ಯುವತಿ ಚೈತ್ರಾ ಶೆಟ್ಟಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಚೆಗೆ ಕಟಪಾಡಿ ಸಮೀಪದ ಕುರ್ಕಾಲಿನಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚೈತ್ರಾ ವೇಷಭೂಷಣ ಇಲ್ಲದೆ ಯಕ್ಷಗಾನದ ಹೆಜ್ಜೆ ಹಾಕಿದ್ದರು. ಕೆಲವರು ಈ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಸಾವಿರಾರು ಮಂದಿ ವಿಡಿಯೋ ನೋಡಿ ಚೈತ್ರಾ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ.
ಜತೆಗೆ, ಚೈತ್ರಾ ಅವರ ಹುಲಿವೇಷ ಕುಣಿತದ ವಿಡಿಯೋ ಕೂಡ ಹೆಚ್ಚು ಸದ್ದು ಮಾಡುತ್ತಿದೆ. ಚೈತ್ರಾ ಚಿಕ್ಕಂದಿನಿಂದಲೂ ಯಕ್ಷಗಾನದ ಬಗ್ಗೆ ಹೆಚ್ಚು ಆಸಕ್ತಿಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.