ADVERTISEMENT

2ನೇ ಹಂತದ ಚುನಾವಣೆ: 373 ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 16:34 IST
Last Updated 11 ಡಿಸೆಂಬರ್ 2020, 16:34 IST

ಉಡುಪಿ: 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಶುಕ್ರವಾರದಿಂದ ಆರಂಭವಾಗಿದ್ದು, ಮೊದಲ ದಿನ 373 ನಾಮಪತ್ರಗಳು ಸಲ್ಲಿಕೆಯಾಗಿವೆ.

ಕುಂದಾಪುರದ 43 ಗ್ರಾಮ ಪಂಚಾಯಿತಿಗಳ 554 ಸ್ಥಾನಗಳಿಗೆ, ಕಾರ್ಕಳದ 27 ಪಂಚಾಯಿತಿಗಳ 399 ಸ್ಥಾನಗಳಿಗೆ ಹಾಗೂ ಕಾಪುವಿನ 16 ಪಂಚಾಯಿತಿಗಳ 290 ಸ್ಥಾನಗಳಿಗೆ 2ನೇ ಹಂತದಲ್ಲಿ ಚುನಾವಣೆ ನಡೆಯಲಿದೆ. 86 ಗ್ರಾಮ ಪಂಚಾಯಿತಿಗಳ 1,243 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಮೊದಲ ದಿನ ಕುಂದಾಪುರದಿಂದ 270, ಕಾರ್ಕಳದಿಂದ 23 ಹಾಗೂ ಕಾಪುವಿನಿಂದ 80 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.