ADVERTISEMENT

ಅಂತರರಾಜ್ಯ ಫುಟ್‌ಬಾಲ್: ಮಹಾರಾಷ್ಟ್ರಕ್ಕೆ ಗೋಲ್ಡನ್ ಈಗಲ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 7:20 IST
Last Updated 17 ಜುಲೈ 2012, 7:20 IST

ಕುಮಟಾ:  ಇಲ್ಲಿಯ ಮಾಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ  ಸೋಮವಾರ ಮುಕ್ತಾಯಗೊಂಡ  21 ವರ್ಷ ವಯಸ್ಸಿನೊಳಗಿನವರ ಅಂತರ ರಾಜ್ಯ ಫುಟ್‌ಬಾಲ್ ಪಂದ್ಯದಲ್ಲಿ ಮಹಾ ರಾಷ್ಟ್ರದ `ಡಿಎಫ್‌ಎಸ್‌ಎ~ ತಂಡ ಚಾಂಪಿ ಯನ್‌ಶಿಪ್ ಪಡೆದುಕೊಂಡಿತು.

ಮಹಾರಾಷ್ಟ್ರದ ಬ್ಲ್ಯಾಕ್ ಡೈಮಂಡ್ ಫುಟ್‌ಬಾಲ್ ಸಂಸ್ಥೆ ಟೂರ್ನಿ ಏರ್ಪಡಿ ಸಿತ್ತು. ಪಂದ್ಯದಲ್ಲಿ ಮಹಾರಾಷ್ಟ್ರದ ಇನ್ನೊಂದು ತಂಡ `ಗೋಲ್ಡನ್ ಈಗಲ್  ತಂಡ~ ಎರಡನೇ ಸ್ಥಾನ ಪಡೆದು ಕೊಂಡರೆ. ಅತಿಥೇಯ `ಕುಮಟಾ ಬಾಯ್ಸ~ ತಂಡ ಮೂರನೇ ಸ್ಥಾನ ಗಳಿಸಿತು. ಚಾಂಪಿಯನ್ ತಂಡಕ್ಕೆ ಟ್ರೋಫಿ  ವಿತರಿಸಿ ಮಾತನಾಡಿದ ಸ್ಥಳೀಯ
 
ಶಾಸಕ ದಿನಕರ ಶೆಟ್ಟಿ, ` ಎಲ್ಲಿ ಫುಟ್ ಬಾಲ್ ಆಟ ಇಲ್ಲಿವೋ ಅಂಥ ಸ್ಥಳದಲ್ಲಿ ಬ್ಲ್ಯಾಕ್ ಡೈಮಂಡ್ ಮಹಾ ರಾಷ್ಟ್ರ ಫುಟ್‌ಬಾಲ್ ಸಂಸ್ಥೆ ಪುಟ್ ಬಾಲ್ ಪಂದ್ಯಗಳನ್ನು ಏರ್ಪಡಿಸುವ ಮೂಲಕ ಆ ಆಟದ ಪರಿಚಯ ಮಾಡು ತ್ತಿರುವುದು ಶ್ಲಾಘನೀಯ ಕೆಲಸ. ಇನ್ನು ಮುಂದೆ ಕುಮ ಟಾದ ಯುವಕರು ಫುಟ್‌ಬಾಲ್ ಆಟ ದತ್ತಲೂ ಹೆಚ್ಚು ಆಸಕ್ತಿ ತೋರಬೇಕು ಎಂದರು.

ಅತಿತಿಯಾಗಿ ಆಗಮಿಸಿದ್ದ  ಮಾಜಿ ಕ್ರೀಡಾಪಟು ಎಂ.ಜೆಡ್ ಶೇಖ್, `ಫುಟ್‌ಬಾಲ್  ಅಂತರರಾಷ್ಟ್ರೀಯ ಮಾನ್ಯತೆ ಹೊಂದಿ ಒಂದು ಅತ್ಯುತ್ತಮ ಆಟ. ಕುಮಟಾದಂತ ಪಟ್ಟಣದಲ್ಲೂ ಈ ಆಟ ಹೆಚ್ಚೆಚ್ಚು ಜನಪ್ರಿಯತೆ ಗಳಿಸಬೇಕಾಗಿದೆ~ ಎಂದರು.

ಚಾಂಪಿಯನ್ ಮಹಾರಾಷ್ಟ್ರದ ಡಿ.ಎಫ್.ಎಸ್.ಎ ತಂಡದ ಅರುಣ   ಬೆಸ್ಟ್ ಗೋಲ್ ಕೀಪರ್ ಗೌರವಕ್ಕೆ ಪಾತ್ರರಾದರೆ, ಅದೇ ತಂಡದ ಸಿಲ್ವಾ ಹೆಚ್ಚು ಗೋಲು ಬಾರಿಸಿದ ಆಟಗಾರ ಪ್ರಶಸ್ತಿ ಬಾಚಿಕೊಂಡರು. ಗೋಲ್ಡನ್ ಈಗಲ್ ತಂಡದ  ಸಂಕೇತ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರ ರಾದರು.
 
ಕಾರ್ಯಕ್ರಮದಲ್ಲಿ   ಬ್ಲ್ಯಾಕ್ ಡೈಮಂಡ್ ಫುಟ್‌ಬಾಲ್ ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಸುಶಾಂತ ಗೋಕರ್ಣ, ಸಂಸ್ಥೆಯ ಸಂಸ್ಥಪನಾ ಸಮಿತಿ ಸದಸ್ಯರಲ್ಲೊಬ್ಬರಾದ ಗಣೇಶ ಗೋಕರ್ಣ, ಪದಾಧಿಕಾರಿಗಳಾದ ಮುರ ಳೀಧರ ಶೆಟ್ಟಿ,  ತರಬೇತು  ದಾರರಾದ ಜಾನಿ ಫರ್ನಾಂಡೀಸ್, ಸುಜಿತ್  ಅಮಿನ್, ಭಾವನಾ ಮಾನೆ ಮೊದಲಾ ದವರಿದ್ದರು. ತಿರುಮಲಾ ನಾಯಕ ಕುಮಟಾ ತಂಡದ ನಾಯಕತ್ವ ವಹಿ ಸಿದ್ದರು. ಮುಂಬೈ, ಮಹಾರಾಷ್ಟ್ರ, ಗುಜರಾತ್ ಕರ್ನಾಟದಿಂದ ತಂಡಗಳು ಪ್ರತಿನಿಧಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.