ADVERTISEMENT

ಅತಂತ್ರವಾದ ಕಾರ್ಮಿಕರ ಬದುಕು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 5:20 IST
Last Updated 4 ಫೆಬ್ರುವರಿ 2012, 5:20 IST

ಕಾರವಾರ: ಇಲ್ಲಿಯ ಟ್ಯಾಗೋರ ಕಡಲತೀರದಲ್ಲಿರುವ ಯುದ್ಧನೌಕೆ ವಸ್ತು ಸಂಗ್ರಹಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕೆಲಸಕ್ಕೆ ಬರಬಾರದು ಎಂದು ನಗರಸಭೆ ಸೂಚಿಸಿದ್ದರಿಂದ ಕಾರ್ಮಿಕರು ಆತಂಕಗೊಂಡಿದ್ದಾರೆ.

ಭಾರತೀಯ ನೌಕಾಸೇನೆಗೆ ಸೇರಿದ ಚಪೆಲ್ ಯುದ್ಧನೌಕೆಯನ್ನು 2006ರ ನ. 14ರಂದು ಟ್ಯಾಗೋರ ಕಡಲತೀರದಲ್ಲಿ ತಂದು ವಸ್ತು ಸಂಗ್ರ ಹಾಲಯವನ್ನಾಗಿ ಮಾಡಲಾಗಿತ್ತು. ಗೈಡ್, ಭದ್ರತಾ ಸಿಬ್ಬಂದಿ, ಕಾವಲು ಗಾರ ಸೇರಿದಂತೆ ಒಟ್ಟು ಏಳು ಕಾರ್ಮಿಕರು ಅಂದಿನಿಂದ ಇಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.


ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಬಾಲಭವನ ಸಮಿತಿಗೆ ಈ ಯುದ್ಧನೌಕೆ ಸೇರಿದ್ದು, ಟೆಂಡರ್ ಮೂಲಕ ಇದರ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗಿತ್ತು. ಈ ಟೆಂಡರ್ ಅವಧಿ ಮುಗಿದಿದ್ದರಿಂದ ಈ ನೌಕೆಯ ಜವಾ ಬ್ದಾರಿಯನ್ನು ನಗರಸಭೆಗೆ ವಹಿಸಿ, ಹೊಸ ಟೆಂಡರ್ ಕರೆಯುವ ತನಕ ಮೊದಲಿದ್ದ ಗುತ್ತಿಗೆದಾರರೇ ಇದರ ನಿರ್ವಹಣೆಯನ್ನು ನೋಡಿಕೊಳ್ಳಬೇಕು ಎಂದು ಹಿಂದಿನ ಜಿಲ್ಲಾಧಿಕಾರಿ ಕೃಷ್ಣಯ್ಯ ಆದೇಶ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ನಗರಸಭೆ ಇದರ ನಿರ್ವ ಹಣೆ ನೋಡಿಕೊಳ್ಳುತ್ತಿತ್ತು. ಯುದ್ಧ ನೌಕೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಪೌರಾಯುಕ್ತರು ಕೆಲಸಕ್ಕೆ ಬರುವುದನ್ನು ನಿಲ್ಲಿಸಿ ಎಂದು ಹೇಳಿದ್ದರಿಂದ ಅವರು ಆತಂಕ ದಲ್ಲಿದ್ದಾರೆ.
 
ದಿಢೀರ್ ಆಗಿ ಕೆಲಸಕ್ಕೆ ಬರ ಬೇಡಿ ಎಂದು ಹೇಳಿದರೆ ನಾವೆಲ್ಲಿಗೆ ಹೋಗಬೇಕು ಎನ್ನುತ್ತಾರೆ ಕಾರ್ಮಿಕರು. ಕರವೇ ಮತ್ತು ಸಿಐಟಿಯು ಕಾರ್ಮಿಕರ ಬೆಂಬಲಕ್ಕೆ ನಿಂತಿದ್ದು ಯಾವುದೇ ಕಾರಣಕ್ಕೂ ಕಾರ್ಮಿಕರನ್ನು ಕೆಲಸದಿಂದ ತೆಗೆಯ ಬಾರದು ಎಂದು ಮನವಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.