ADVERTISEMENT

ಅಲೆಗಳ ಅಬ್ಬರ: ಬಲೆಗೆ ಬೀಳದ ಬಂಗಡೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 7:00 IST
Last Updated 18 ಜುಲೈ 2013, 7:00 IST

ಕುಮಟಾ: ಮಳೆಯಿಲ್ಲದಿದ್ದರೆ ಸಮುದ್ರದಲ್ಲಿ  ಬಂಗಡೆ ಮೀನು ಸಿಗುತ್ತದೆ ಎಂಬ ಮಾತು ಬುಧವಾರ ಕುಮಟಾ ಮಟ್ಟಿಗೆ ಸುಳ್ಳಾಗಿದೆ.
ಕಳೆದ ನಾಲ್ಕು ದಿವಸಗಳಿಂದ ಮಳೆ ಕಡಿಮೆಯಿದ್ದ ಕಾರಣಕ್ಕೆ ಸಮುದ್ರಕ್ಕಿಳಿಯಲು ಸಾಧ್ಯವಾದ 10 ಎಚ್‌ಪಿ ಎಂಜಿನ್ ಹೊಂದಿರುವ  ದೋಣಿಗಳ ಮೀನುಗಾರರು  ರುಚಿಕರ  ಬಂಗಡೆ ಮೀನು ಹಿಡಿದು ತಂದು ಮೀನು ತಿನ್ನುವವರು ಮಳೆಗಾಲದಲ್ಲೂ  ಬಾಯಿ ಚಪ್ಪರಿಸುವಂತೆ ಮಾಡಿದ್ದರು. ಆದರೆ  ಬುಧವಾರ ಮಳೆಯ ಲಕ್ಷಣ ಕೊಂಚವೂ ಇಲ್ಲದಿದ್ದರೂ ಸಮುದ್ರಕ್ಕಿಳಿದ ಮಿನುಗಾರರಿಗೆ ಬಂಗಡೆ ಮೀನು ಸಿಕ್ಕಿಲ್ಲ. ಬದಲಾಗಿ ಅಷ್ಟಿಷ್ಟು ಬೆಳ್ಳಂಜಿ ಹಾಗೂ ಇತರೆ ಜಾತಿಯ ಮೀನು ಸಿಕ್ಕಿವೆ.

`ಬಂಗಡೆ ಮೀನಿನ ತಂಡ ಸಮುದ್ರದ ದಡದತ್ತ ಬಾರದಿದ್ದರಿಂದ ಬುಧವಾರ ದೋಣಿಗಳಿಗೆ ಅವು ಸಿಕ್ಕಿಲ್ಲ. ಮಳೆ ಕಡಿಮೆ ಇದ್ದರೂ ` ಬಂಗಡೆ ತೆಪ್ಪ'  ( ಬಂಗಡೆ ತಂಡ) ದಡದತ್ತ ಬಂದಾಗ ಮಾತ್ರ ಅವು  ಬಲೆಗಳಿಗೆ ಸಿಗಲು ಸಾಧ್ಯ. ಕೆಲವು ಸಲ ಗಾಳಿ ಹೆಚ್ಚಾದರೆ ಮೀನುಗಾರರು ಕೊಂಚ ದೂರ ಹೋಗಿ ವಾಪಸು ಬರುವುದು ಅನಿವಾರ್ಯವಾಗುತ್ತದೆ' ಎಂದು ಮೀನುಗಾರರೊಬ್ಬರು ತಿಳಿಸಿದರು.

ಬುಧವಾರ ಮಧ್ಯಾಹ್ನದ ನಂತರ  ಅಲೆಗಳ ಅಬ್ಬರ ಕೂಡ ಹೆಚ್ಚಾಗ್ದ್ದಿದರಿಂದ ಹೆಚ್ಚಿನ ಮೀನುಗಾರರು ಸಮುದ್ರಕ್ಕಿಳಿಯುವ ಸಾಹಸ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.