ಶಿರಸಿ: ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಾಲ್ಲೂಕಿನ ಇಟಗುಳಿ- ಅಂದಳ್ಳಿ ರಸ್ತೆ ಲೋಕಾ ರ್ಪಣೆ, ಇದೇ ರಸ್ತೆಯ ಮುಂದಿನ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ನೀರ್ನಳ್ಳಿಯಲ್ಲಿ ರೂ.10 ಲಕ್ಷ ಮೊತ್ತದಲ್ಲಿ ನಿರ್ಮಾಣವಾಗಿರುವ ಪಶು ಚಿಕಿತ್ಸಾಲಯ ಹಾಗೂ ರೂ.19ಲಕ್ಷ ವೆಚ್ಚದ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿದರು.
ಶುಕ್ರವಾರ ಇಟಗುಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಗ್ರಾಮೀಣ ಅಭಿವೃದ್ಧಿ ಸರ್ಕಾರದ ಗುರಿಯಾಗಿದ್ದು ಈ ನಿಟ್ಟಿ ನಲ್ಲಿ ಎಲ್ಲ ಅಗತ್ಯ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಸಂಪರ್ಕ ರಸ್ತೆಗಳು ಸಮಾಜದ ಅಭಿವೃದ್ಧಿ ಸಂಕೇತ ವಾಗಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳ ಜೊತೆಗೆ ಮುಖ್ಯ ರಸ್ತೆಗಳು ಸಹ ಅಭಿವೃದ್ಧಿ ಹೊಂದುತ್ತಿವೆ. ಪ್ರಸಕ್ತ ಬಜೆಟ್‌ನಲ್ಲಿ ರಸ್ತೆ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದ್ದು, ಕೇಂದ್ರ ಸರ್ಕಾರಕ್ಕೆ ವಿನಂತಿಸಲಾಗಿದೆ ಎಂದರು.
ಪಶು ಸಂಗೋಪನೆಯ ಅಭಿವೃದ್ಧಿ ಯಲ್ಲಿ ಪಶು ವೈದ್ಯರ ಕೊರತೆ ಕಾಡು ತ್ತಿದ್ದು, ಸರ್ಕಾರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸಚಿವರು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾ ಯಿತಿ ವಸತಿ ಯೋಜನೆಯಡಿ ಮಂಜೂ ರಾದ ಇಂದಿರಾ ಆವಾಸ್ ಯೋಜನೆಯ 21 ಫಲಾನುಭವಿಗಳಿಗೆ ಮನೆ ಮಂಜೂ ರಾತಿ ಹಾಗೂ ಕಾಮಗಾರಿ ಆದೇಶ ಪತ್ರ ನೀಡಿದರು.
ತಾ.ಪಂ.ಅಧ್ಯಕ್ಷೆ ಸುಮಂಗಲಾ ಭಟ್ಟ, ಜಿ.ಪಂ. ಸದಸ್ಯೆ ಶೋಭಾ ನಾಯ್ಕ, ಇಟಗುಳಿ ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಗೌಡ, ಉಪಾಧ್ಯಕ್ಷ ಗಣಪತಿ ಗೌಡ, ಡಿ.ಎಸ್.ಹೆಗಡೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.