ADVERTISEMENT

ಉಲ್ಲಂಘನೆ: ಮದ್ಯದಂಗಡಿಗಳ ಪರವಾನಗಿ ಅಮಾನತು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 9:28 IST
Last Updated 21 ಏಪ್ರಿಲ್ 2018, 9:28 IST

ಕಾರವಾರ: ಅಬಕಾರಿ ನಿಯಮ ಮತ್ತು ಷರತ್ತು ಉಲ್ಲಂಘಿಸಿದ ಕಾರಣಕ್ಕೆ ಜಿಲ್ಲೆಯ ವಿವಿಧೆಡೆ 12 ಮದ್ಯದಂಗಡಿಗಳ ಪರವಾನಗಿಯನ್ನು ಚುನಾ ವಣೆ  ಮುಗಿಯುವ ವರೆಗೆ ಅಮಾ ನತು ಮಾಡಲಾಗಿದೆ. 24 ಪರವಾನಗಿದಾರರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎಲ್.ಎ.ಮಂಜುನಾಥ್ ಹೇಳಿದ್ದಾರೆ.

ಯಾವ ಅಂಗಡಿಗಳು?:  ಯಲ್ಲಾಪುರದ ತಿರುಮಲ ವೈನ್ಸ್, ತ್ರಿಭುವನ ವೈನ್ಸ್, ಕುಮಟಾದ ಕ್ರಿಸ್ಟಲ್‌ಬಾರ್, ಪ್ರಸೀಲ್ ವೈನ್ಸ್, ಮಹಾಬಲೇಶ್ವರ ರಿಕ್ರಿಯೇಷನ್ ಅನೋಷನ್ಸ್, ಆಶೀರ್ವಾದ ವೈನ್ಸ್, ಮುಂಡಗೋಡದ ಸೋನಿಯಾ ವೈನ್ಸ್, ದಾಂಡೇಲಿ ರೇಣುಕಾ ವೈನ್ಸ್, ಅಂಕೋಲಾದ ಎಂಎಸ್‌ಐಎಲ್, ಅಪೊಲೊ ಬಾರ್ ಅಂಡ್ ರೆಸ್ಟೋರೆಂಟ್‌, ಪ್ರಮೀಳಾ ಡ್ರಾಪ್ ವೈನ್ಸ್, ಶಿರಸಿಯ ಪಾರಿಜಾತ ಬಾರ್ ಅಂಡ್ ರೆಸ್ಟೋರೆಂಟ್‌.  ನಿಯಮ ಉಲ್ಲಂಘಿಸಿ ವ್ಯಾಪಾರ, ಚುನಾವಣೆ ಪಾರ್ಟಿಗಳಿಗೆ ಮದ್ಯ ಸರಬರಾಜು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮದ್ಯವಶ: ಅಬಕಾರಿ ಇಲಾಖೆ  ಸಿಬ್ಬಂದಿ ಜಿಲ್ಲೆಯ 33 ಕಡೆ ದಾಳಿ ನಡೆಸಿ ₹2,516 ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಗೋವಾ ಕಡೆಯಿಂದ ಕಾರವಾರ ಕಡೆಗೆ ಬರುತ್ತಿದ್ದ ಸ್ಕೂಟರ್‌ನಲ್ಲಿ ಸಾಗಿಸಲಾಗುತ್ತಿದ್ದ ₹ 7,200 ಮೌಲ್ಯದ ಗೋವಾ ವಿಸ್ಕಿಯನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ವಿಜಯ, ವಿನಾಯಕ ರಮೇಶ ಕಲ್ಗುಟ್ಕರ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.