ADVERTISEMENT

ಕಾರವಾರದ ಕೋಟ್ಯಧಿಪತಿ ಅಸ್ನೋಟಿಕರ್

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 11:11 IST
Last Updated 17 ಏಪ್ರಿಲ್ 2013, 11:11 IST

ಕಾರವಾರ: ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಅವರು ರೂ18 ಕೋಟಿ ಮೌಲ್ಯದ ಒಡೆಯರಾಗಿದ್ದಾರೆ.

ನಾಮಪತ್ರದೊಂದಿಗೆ ಚುನಾವಣಾ ಅಧಿಕಾರಿಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಅಸ್ನೋಟಿಕರ್ ಅವರು ರೂ5.37 ಕೋಟಿ ಚರಾಸ್ತಿ ಹಾಗೂ ರೂ9.46 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಂಚೆ ಕಚೇರಿಯಲ್ಲಿ ಅಥವಾ ವಿಮಾ ಕಂಪೆನಿಯಲ್ಲಿ, ಎನ್‌ಎಸ್‌ಎಸ್ ಪೊಸ್ಟಲ್ ಸೆವಿಂಗ್ಸ್ ಸೇರಿದಂತೆ ವಿವಿಧ ಭದ್ರತಾ ಯೋಜನೆಯಲ್ಲಿ ರೂ1.57 ಕೋಟಿ ತೊಡಗಿಸಿದ್ದಾರೆ. ಎರಡು ಲಕ್ಷ ರೂಪಾಯಿ ನಗದು ಹಾಗೂ ವಿವಿಧ ಬ್ಯಾಂಕ್‌ಗಳಲ್ಲಿ ರೂ24,59,865 ಅನ್ನು ಠೇವಣಿ ಇಟ್ಟಿದ್ದಾರೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಜ್, ಸ್ಕೋಡಾ ಪಾಬಿಯಾ ಕಾರು, ಎರಡು ಇನ್ನೊವಾ ಕಾರು, ಪಸ್ಲರ್ ಬೈಕ್ ಸೇರಿದಂತೆ ಒಟ್ಟು ರೂ1.3 ಕೋಟಿ ಮೌಲ್ಯದ ವಾಹನಗಳು ಸಚಿವರ ಬಳಿ ಇದೆ.

ಸಚಿವ ಅಸ್ನೋಟಿಕರ ರೂ5.95 ಲಕ್ಷ ಮೌಲ್ಯದ 200 ಗ್ರಾಂ ಚಿನ್ನ ಹಾಗೂ 750 ಗ್ರಾಂ. ಬೆಳ್ಳಿ ಹೊಂದಿದ್ದಾರೆ. ವಿವಿಧ ಉದ್ದಿಮೆಗಳಲ್ಲಿ ರೂ15. 65 ಲಕ್ಷ ಆಸ್ತಿ ಹೊಂದಿರುವುದನ್ನು ಆಸ್ತಿ ವಿವರದಲ್ಲಿ ಘೋಷಿಸಿಕೊಂಡಿದ್ದಾರೆ.

ತಾಲ್ಲೂಕಿನ ಬಿಣಗಾದಲ್ಲಿ ಅಂದಾಜು ರೂ2.5 ಲಕ್ಷ ಮೌಲ್ಯದ ಎಂಟು ಗುಂಟೆ, ಕೋಡಿಬಾಗ, ಬೆಂಗಳೂರಿನ ಮತ್ತಿಕೆರೆ, ಬಿಣಗಾ, ಮುಡಗೇರಿ, ಬಾಡ, ಶೆಟಗೇರಿಯಲ್ಲಿ ರೂ1.18 ಕೋಟಿ ಮೌಲ್ಯದ ಕೃಷಿ ಮತ್ತು ಕೃಷಿಯೇತರ ಜಮೀನು ಹೊಂದಿದ್ದಾರೆ.

ಬೆಂಗಳೂರು ಪ್ಯಾಲೇಸ್ ರಸ್ತೆಯಲ್ಲಿ ರೂ1.25 ಕೋಟಿ ಮೌಲ್ಯದ ಪ್ಲ್ಯಾಟ್ ಹಾಗೂ ಅಂಕೋಲಾ ತಾಲ್ಲೂಕಿನ ಶೆಡಗೇರಿಯಲ್ಲಿ ಸಚಿವರು ಮನೆ ಹೊಂದಿದ್ದಾರೆ.

ಸಚಿವರ ಪತ್ನಿ ಗೌರಿ ಅವರ ಹೆಸರಿನಲ್ಲಿ ರೂ45.61ಲಕ್ಷ ಮೌಲ್ಯದ ಚರಾಸ್ತಿ ಹಾಗೂ ರೂ12 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.
ಐಎನ್‌ಜಿ ವೈಶ್ಯ ವಿಮಾ ಯೋಜನೆಯಲ್ಲಿ ಎರಡು ಲಕ್ಷ ರೂಪಾಯಿ ತೊಡಗಿಸಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ 95,716 ರೂಪಾಯಿ  ಗೌರಿಯವರು ರೂ26.46 ಲಕ್ಷ ಮೌಲ್ಯದ 980 ಗ್ರಾಂ ಚಿನ್ನ ಅವರ ಬಳಿ ಇದೆ.

ಸಚಿವ ಅಸ್ನೋಟಿಕರ್ ಅವರ ಹಿರಿಯ ಮಗ ಸಿದ್ಧಾಂತ ಹೆಸರಿನಲ್ಲಿ ರೂ5.61 ಲಕ್ಷ  ಮೌಲ್ಯದ ಚರ ಆಸ್ತಿ ಇದೆ. ವಿವಿಧ ಭದ್ರತಾ ಪತ್ರಗಳಲ್ಲಿ ರೂ3.99. ಲಕ್ಷ ತೊಡಗಿಸಿದ್ದಾರೆ.

ಸಚಿವರ ಎರಡನೇ ಪುತ್ರ ಅದಿತ್ ಹೆಸರಿನಲ್ಲಿ ರೂ18.67 ಲಕ್ಷ ಚರ ಆಸ್ತಿ ಇದೆ. ವಿವಿಧ ಭದ್ರತಾ ಪತ್ರಗಳಲ್ಲಿ ರೂ17. 99 ಲಕ್ಷ ಮತ್ತು ರೂ67 ಸಾವಿರ ಮೌಲ್ಯದ 25 ಗ್ರಾಂ. ಚಿನ್ನ ಅದಿತ್ ಹೊಂದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.