ADVERTISEMENT

ಕಾಳಿ ಸೇತುವೆಯಲ್ಲಿ ಬಾಂಬ್ ಪತ್ತೆ!

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 10:05 IST
Last Updated 6 ಜನವರಿ 2012, 10:05 IST

ಕಾರವಾರ: 9/11ರ ಮುಂಬೈ ನಗರದ ಮೇಲೆ ಉಗ್ರರ ದಾಳಿ ಘಟನೆಯ ನಂತರ ರಾಜ್ಯದ ಕರಾವಳಿ ತೀರದಲ್ಲಿ ಕಟ್ಟೆಚ್ಚರ ವಹಿಸುವ ದೃಷ್ಟಿಯಿಂದ ಭಾರತೀಯ ನೌಕಾಪಡೆ, ಕೋಸ್ಟ್ ಗಾರ್ಡ್. ಕರಾವಳಿ ಕಾವಲು ಪಡೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ 36 ಗಂಟೆಗಳ ಕಾಲ ಜಿಲ್ಲೆಯಾದ್ಯಂತ `ಸಾಗರ ಕವಚ~ ಹೆಸರಿನಡಿ ಅಣಕು ಕಾರ್ಯಾಚರಣೆಯನ್ನು ಹಮ್ಮಿ ಕೊಂಡಿವೆ.

ಗುರುವಾರ ಆರಂಭವಾಗಿರುವ ಅಣಕು ಕಾರ್ಯಾಚರಣೆಯಲ್ಲಿ ಮೀನು ಗಾರರ ಸೋಗಿನಲ್ಲಿ ದೋಣಿಯೊಂದ ರಲ್ಲಿ ಬಂದ ನೌಕಾನೆಲೆ ನಾಲ್ಕು ಸಿಬ್ಬಂದಿ ನಗರದ ಕಾಳಿ ಸೇತುವೆಗೆ ಕೆಂಪು ಚೀಲವೊಂದನ್ನು ಕಟ್ಟಿ ಹೋಗಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಅವರು ಪರಾರಿಯಾಗಿದ್ದರು.

ಮೀನುಗಾರರ ಸೋಗಿನಲ್ಲಿ ಬಂದ ನೌಕಾನೆಲೆ ಸಿಬ್ಬಂದಿ ಕೂರ್ಮಗಡಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಕರಾವಳಿ ಕಾವಲು ಪಡೆ ಪೊಲೀಸರು ಅವರನ್ನು ಬಂಧಿಸಿ ಕೂರ್ಮಗಡ ಮತ್ತು ಲೈಟ್ ಹೌಸ್ ದ್ವೀಪಕ್ಕೆ ಹೋಗುವ ಅವರ ಪ್ರಯತ್ನವನ್ನು ವಿಫಲಗೊಳಿಸಿದರು. 

 ಮಾರುವೇಷದಲ್ಲಿ ಬಂದ ಇನ್ನಿಬ್ಬರು ನೌಕಾನೆಲೆ ಸಿಬ್ಬಂದಿ ಬೈಕ್‌ನಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರದತ್ತ ಹೋಗು ತ್ತಿದ್ದಾರೆ ಮಲ್ಲಾಪುರ ಪೊಲೀಸರು ಕದ್ರಾ ಚೆಕ್‌ಪೋಸ್ಟ್ ಬಳಿ ಬಂಧಿಸಿ ಅವರ ಗುರಿಯನ್ನು  ವಿಫಲಗೊಳಿಸಿದರು. 

ಬೆಳಿಗ್ಗೆ 6ರಿಂದ ಅಣಕು ಕಾರ್ಯಾ ಚರಣೆ ಆರಂಭಗೊಂಡಿದ್ದು ರಾಷ್ಟ್ರೀಯ ಹೆದ್ದಾರಿ-17ರಲ್ಲಿ ನಗರದ ಬೈತ ಖೋಲ ಮತ್ತು ಕಾಳಿ ಸೇತುವೆಯ ಬಳಿ ಬ್ಯಾರಿಕೆಡ್‌ಗಳನ್ನು ಹಾಕಿ ಪೊಲೀಸರು ಎಲ್ಲ ವಾಹನಗಳನ್ನು ತಪಾಸಣೆ ಮಾಡು ತ್ತಿದ್ದಾರೆ. ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲ ವಾಹನಗಳ ನೊಂದಣಿ ಸಂಖ್ಯೆ ಯನ್ನು ಪೊಲೀಸರು ದಾಖಲಿಸಿ ಕೊಂಡರು. ವಾಹನಗಳಲ್ಲಿರುವ ಬ್ಯಾಗ್‌ಗಳನ್ನು ತಪಾಸಣೆಗೊಳಪಡಿಸಿದರು.

ಸಮುದ್ರ ಮಾರ್ಗವಾಗಿ ಮಾರು ವೇಷದಲ್ಲಿ ಸಿಬ್ಬಂದಿಯನ್ನು ಪತ್ತೆ ಮಾಡಲು ಕರಾವಳಿ ಕಾವಲು ಪಡೆಯ ಇಂಟರ್‌ಸೆಪ್ಟರ್ ಬೋಟ್‌ಗಳು ಅರಬ್ಬಿ ಸಮುದ್ರದಲ್ಲಿ ತಪಾಸಣೆಯನ್ನು ತೀವ್ರ ಗೊಳಿಸಿದ್ದಾರೆ. ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ಯಾಂತ್ರೀಕೃತ ದೋಣಿಗಳಲ್ಲಿರುವ ಮೀನುಗಾರರನ್ನೂ ಪೊಲೀಸರು ವಿಚಾರಣೆಗೊಳಪಡಿಸಿ, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಪೊಲೀಸ್ ಅಥವಾ ನೌಕಾನೆಲೆ ಸಿಬ್ಬಂದಿ ಮಾರುವೇಷದಲ್ಲಿ ಬಂದು ಬಸ್ ನಿಲ್ದಾಣ, ಸೇತುವೆ, ಜನನಿಬೀಡ ಪ್ರದೇಶದಲ್ಲಿ ಬಾಂಬ್ ಹೊಲುವ ವಸ್ತುವೊಂದನ್ನು ಇಟ್ಟು ಹೋಗು ತ್ತಾರೆ. ಹೀಗೆ ಮಾರುವೇಷದಲ್ಲಿ ಬರುವ ಸಿಬ್ಬಂದಿಯನ್ನು ನಾಗರಿಕ ಮತ್ತು ಕರಾವಳಿ ಕಾವಲು ಪಡೆ ಪೊಲೀಸರು ಪತ್ತೆಹಚ್ಚಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.