ADVERTISEMENT

ಡಾ. ಶರಣ ಬಿರಾದಾರ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 7:47 IST
Last Updated 25 ಏಪ್ರಿಲ್ 2013, 7:47 IST

ಶಿರಸಿ: ಗ್ರಾಮೀಣ ಆರೋಗ್ಯ, ಮಹಿಳಾ ಸಶಕ್ತೀಕರಣ, ಗ್ರಾಮೀಣ ಅಭಿವೃದ್ಧಿಯಂತಹ ಸಮುದಾಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸ್ಕೊಡ್‌ವೆಸ್ ಸಂಸ್ಥೆ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಡಾ. ಶರಣ ಬಿರಾದಾರ ಪ್ರಶಸ್ತಿ ನೀಡಿ ಸನ್ಮಾನಿಸಿತು.

ಗ್ರಾಮೀಣ ಮಟ್ಟದಲ್ಲಿ ನಿಸ್ವಾರ್ಥ ಆರೋಗ್ಯ ಸೇವೆ ನೀಡುತ್ತಿರುವ ವೈದ್ಯಾಧಿಕಾರಿಗಳು ಹಾಗೂ ತಂಡಕ್ಕೆ ಡಾ. ಶರಣ ಬಿರಾದಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಸಕ್ತ ಸಾಲಿನ ಅತ್ಯುತ್ತಮ ವೈದ್ಯಾಧಿಕಾರಿ ಪ್ರಶಸ್ತಿಯನ್ನು ಯಲ್ಲಾಪುರ ಸಂಚಾರಿ ಆರೋಗ್ಯ ಘಟಕದ ಡಾ.ಚನ್ನಬಸಪ್ಪ ಶಿರಗುಪ್ಪಿ, ಅತ್ಯುತ್ತಮ ಔಷಧ ವಿತರಕ ಪುರಸ್ಕಾರವನ್ನು ಸಂತೋಷ ಕಡೂರ್, ಅತ್ಯುತ್ತಮ ಶುಶ್ರೂಕಿಯಾಗಿ ಯಲ್ಲಾಪುರ ಘಟಕದ ಅನಿತಾ ಹರಿಕಾಂತ್ ಹಾಗೂ ಅತ್ಯುತ್ತಮ ಚಾಲಕ ಪ್ರಶಸ್ತಿಯನ್ನು ಮುಂಡಗೋಡ ಘಟಕದ ಮಲ್ಲೇಶ ಬಿ.ಡಿ. ಪಡೆದುಕೊಂಡರು. ಕುಮಟಾ ಸಂಚಾರಿ ಆರೋಗ್ಯ ಘಟಕಕ್ಕೆ ಅತ್ಯುತ್ತಮ ಘಟಕ ಪ್ರಶಸ್ತಿ ನೀಡಲಾಯಿತು.

ಸಂಸ್ಥೆಯ ವಿವಿಧ ಯೋಜನೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಹಲವರಿಗೆ  ವಿಶೇಷ ಸೇವಾ ಪುರಸ್ಕಾರ ನೀಡಲಾಯಿತು. ಕೇಂದ್ರ ಸರ್ಕಾರದ ಆಸ್ಪತ್ರೆ ಸೇವಾಗಳ ಹೆಚ್ಚುವರಿ ನಿರ್ದೇಶಕ ಹಾಗೂ ದಿವಂಗತ ಡಾ. ಶರಣ ಬಿರಾದಾರ ತಂದೆ ಡಾ. ಉಮೇಶ ಚಂದ್ರ ಬಿರಾದಾರ ಉಪಸ್ಥಿತರಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶೋಕಕುಮಾರ, ಮಾರಿಕಾಂಬಾ ದೇವಾಲಯದ ಧರ್ಮದರ್ಶಿ ಜ್ಯೋತಿ ಭಟ್ಟ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಎಚ್.ಟಿ. ವೆಂಕಟೇಶಮೂರ್ತಿ, ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ ನಾಯ್ಕ, ಸಂಸ್ಥೆಯ ಆಡಳಿತ ಮತ್ತು ಹಣಕಾಸು ಅಧಿಕಾರಿ ಸರಸ್ವತಿ ಎನ್. ರವಿ ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಶೈಲಜಾ ಗೊರ‌್ನಮನೆ ಸಂಸ್ಥೆಯ ವೆಬ್‌ಸೈಟ್ ಉದ್ಘಾಟಿಸಿದರು. ಗಣಪತಿ ನಾಯ್ಕ ಸ್ವಾಗತಿಸಿದರು. ಹೇಮಲತಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.