ADVERTISEMENT

ತಾಲ್ಲೂಕು ಕಸಾಪ ಚುನಾವಣೆಗೆ ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 8:35 IST
Last Updated 6 ಫೆಬ್ರುವರಿ 2012, 8:35 IST

ಹಳಿಯಾಳ:  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಹಾಗೂ ಕಾರ್ಯಕಾರಿ ಮಂಡ ಳಿಯ ಸದಸ್ಯರ ಚುನಾವಣೆಯ ಅಧಿ ಸೂಚನೆ ವೇಳಾಪಟ್ಟಿಯನ್ನು ತಹಸೀಲ್ದಾರ ವರು ಬಿಡುಗಡೆಗೊಳಿಸಿ ಪ್ರಕಟಣೆಗೆ ತಿಳಿಸಿ ರುತ್ತಾರೆ.

ಚುನಾವಣೆಗೆ ಸಂಬಂಧಿಸಿದಂತೆ ಕರಡು ಮತದಾರ ಪ್ರಕಟಣೆ ಇದೇ 2 ರಂದು ತಾಲ್ಲೂಕು ಕಚೇರಿಯಲ್ಲಿ ಪ್ರಕಟಿಸ ಲಾಗಿದ್ದು. ಮತದಾರ ಪಟ್ಟಿ ಬಗ್ಗೆ ಆಕ್ಷೇಪಣೆ ಸ್ವೀಕರಿಸಲು ಕೊನೆಯ 16 ರ ವರೆಗೆ ತಾಲ್ಲೂಕು ಕಚೇರಿಯಲ್ಲಿ ಸ್ವೀಕರಿಸ ಲಾಗುವುದು.

ಮತದಾರರ ಅಂತಿಮ ಪಟ್ಟಿ ಮಾರ್ಚ್ 14 ರಂದು ತಾಲ್ಲೂಕು ಕಚೇರಿಯಲ್ಲಿ ಪ್ರಕಟಣೆಗೊಳಿಸಲಾಗುವುದು. ನಾಮಪತ್ರ ಸ್ವೀಕಾರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ/ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಗಳಿಗೆ, ಬೆಂಗಳೂರಿನಲ್ಲಿ ರುವ ಕೇಂದ್ರ ಸಾಹಿತ್ಯ ಪರಿಷತ್ತಿನ ಚುನಾವಣಾ ಕಚೇರಿಯಲ್ಲಿ.

ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಗಳಿಗೆ, ಆಯಾ ಜಿಲ್ಲಾ ಕೇಂದ್ರದ ತಾಲ್ಲೂಕು ತಹಸೀಲ್ದಾರ ಕಚೇರಿ ಯಲ್ಲಿ ಬೆಂಗಳೂರ ನಗರ ಜಿಲ್ಲಾ ಘಟಕ ಅಧ್ಯಕ್ಷ ಸ್ಥಾನಕ್ಕೆ, ಬೆಂಗಳೂರಿನಲ್ಲಿರುವ ಕೇಂದ್ರ ಸಾಹಿತ್ಯ ಪರಿಷತ್ತಿನ ಚುನಾವಣಾ ಕಛೇರಿಯಲ್ಲಿ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಅಧ್ಯಕ್ಷ ಸ್ಥಾನಕ್ಕೆ, ಬೆಂಗಳೂರಿನಲ್ಲಿರುವ ಕೇಂದ್ರ ಸಾಹಿತ್ಯ ಪರಿಷತ್ತಿನ ಚುನಾವಣಾ ಕಛೇರಿಯಲ್ಲಿ ಮಾರ್ಚ 21 ರಿಂದ 28ರ ವರೆಗೆ ಪ್ರತಿದಿನ ಬೆಳ್ಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆ ಯವರೆಗೆ ರಜಾ ದಿನಗಳನ್ನು ಹೊರತು ಪಡಿಸಿ ನಾಮಪತ್ರ ಸ್ವೀಕರಿಸಲಾಗುವುದು.

ನಾಮ ಪತ್ರಗಳ ಸ್ವೀಕಾರದ ಕೊನೆಯ ದಿನ ಮಾರ್ಚ್ 28 ರಂದು ಸಂಜೆ 5 ಗಂಟೆಯ ವರೆಗೆ ಸ್ವೀಕರಿಸಲಾಗವುದು, ನಾಮಪತ್ರ ಪರಿಶೀಲನೆ (ಬೆಂಗಳೂರಿನಲ್ಲಿ ರುವ ಕೇಂದ್ರ ಸಾಹಿತ್ಯ ಪರಿಷತ್ತಿನ ಕೇಂದ್ರ ಚುನಾವಣಾ ಅಧಿಕಾರಿಗಳ ಕೇಂದ್ರ ಕಚೇರಿಯಲ್ಲಿ ಹಾಗೂ ಆಯಾ ಜಿಲ್ಲಾ ಕೇಂದ್ರ ತಾಲ್ಲೂಕು ತಹಸೀಲ್ದಾರ  ಕಚೇರಿ ಯಲ್ಲಿ ಮಾರ್ಚ್ 31ರ ಬೆಳ್ಳಿಗ್ಗೆ 11 ಗಂಟೆಗೆ ಪರಿಶೀಲಿಸಲಾಗವುದು.

ನಾಮಪತ್ರ ಹಿಂತೆಗೆದುಕೊಳ್ಳಲು ಏಪ್ರಿಲ್ 5 ಮಧ್ಯಾಹ್ನ 3 ಗಂಟೆಯ ವರೆಗೆ ವೇಳೆ ನಿಗದಿ ಪಡಿಸಲಾಗಿದೆ.
ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ ಏಪ್ರಿಲ್ 5 ಮಧ್ಯಾಹ್ನ ಪ್ರಕಟಿಸಲಾಗು ವುದು. ಗಡಿ ನಾಡು/ಹೊರನಾಡು ಮತ ದಾರರ ಕೇಂದ್ರ ಚುನಾವಣಾ ಅಧಿಕಾರಿಗಳ  ಕಚೇರಿಯಿಂದ ರಜಿಸ್ಟರ್ ಅಂಚೆ ಮೂಲಕ ಮತ ಪತ್ರಗಳ ರವಾನೆ ಮಾಡಲು ಕೊನೆಯ ದಿನಾಂಕ ಎಪ್ರಿಲ್ 13. ಮತದಾನ ಎಪ್ರಿಲ್ 29 ರಂದು ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ನಡೆಯಲಿದೆ.

ಮತ ಏಣಿಕೆ ಅಂದೇ ಸಾಯಂಕಾಲ ನಡೆಯಲಿದೆ ಎಂದು ತಹಸೀಲ್ದಾರ  ಅಜೀಜ್ ಆರ್ ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.