ADVERTISEMENT

ಧರಣಿ ನಿರತರಿಗೆ ಕವಿಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 8:55 IST
Last Updated 2 ಜನವರಿ 2012, 8:55 IST

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಕಿಲೋ ಮೀಟರ್ ವ್ಯಾಪ್ತಿಯೊಳಗಿರುವ ಗ್ರಾಮಗಳ ಜಮೀನು ಸ್ವಾಧೀನಪಡಿಸಿಕೊಂಡು ಪುನ ರ್ವಸತಿ ಕಲ್ಪಿಸಬೇಕು ಎಂದು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿ ಷ್ಟಾವಧಿ ಧರಣಿ ಹಮ್ಮಿಕೊಂಡ ಗ್ರಾಮ ಸ್ಥರನ್ನು ಭಾನುವಾರ ಸಂಜೆ ಜಿಲ್ಲೆಯ ಹಿರಿಯ ಕವಿಗಳು ಭೇಟಿ ಮಾಡಿದರು.

`ಚಿಂತನ~ ಉತ್ತರ ಕನ್ನಡ ಹಮ್ಮಿ ಕೊಂಡ ಕವಿಗೋಷ್ಠಿಯಲ್ಲಿ ಪಾಲ್ಗೊ ಳ್ಳಲು ಆಗಮಿಸಿದ ಕವಿ ವಿಷ್ಣು ನಾಯ್ಕ, ವಿ.ಜೆ.ನಾಯಕ, ವಿಡಂಬಾರಿ, ಮೋಹನ ಹಬ್ಬು, ರಾಮಾನಾಯ್ಕ ಅವರು ಗ್ರಾಮಸ್ಥರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಕೈಗಾ ಗ್ರಾಮಸ್ಥರು ಎದುರಿಸು ತ್ತಿರುವ ಆರೋಗ್ಯ ಸಮಸ್ಯೆಗಳನ್ನು ಹೋರಾಟ ಸಮಿತಿ ಅಧ್ಯಕ್ಷ ಶಾಮ ನಾಥ ನಾಯ್ಕ ವಿವರಿಸಿದರು. ಹಿಂದೆ ಮಾಡಿರುವ ಹೋರಾಟ, ಪತ್ರ ವ್ಯವ ಹಾರ ಮತ್ತು ಸರ್ಕಾರ ನೀಡಿರುವ ಭರ ವಸೆಗಳ ಬಗ್ಗೆಯೂ ಅವರು ಕವಿಗಳಿಗೆ ಮಾಹಿತಿ ನೀಡಿದರು.

`ಮನುಷ್ಯನಿಗೆ ಬದುಕು ಮುಖ್ಯ. ಅವರ ಬದುಕಿನ ಜೊತೆ ಸರ್ಕಾರ ಚೆಲ್ಲಾಟ ಆಡಬಾರದು. ಭಯದಲ್ಲಿ ಬದುಕು ಪರಿಸ್ಥಿತಿ ನಿರ್ಮಾಣ ಮಾಡ ಬಾರದು~ ಎಂದು ಎಲ್ಲರೂ ಅಭಿಪ್ರಾ ಯಪಟ್ಟರು.

`ನೀವು ಇಟ್ಟಿರುವ ಬೇಡಿಕೆ ಯೋಗ್ಯ ವಾಗಿದೆ. ಹೋರಾಟ ಮಾಡಿಯೇ ಎಲ್ಲವನ್ನು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿಮ್ಮ ಬೇಡಿಕೆ ಗಳನ್ನು ಈಡೇರಿಸಬೇ ಕಾಗಿರುವುದು ಸರ್ಕಾರದ ಕರ್ತವ್ಯ~ ಎಂದರು.

`ಕಳೆದ 25 ದಿನಗಳಿಂದ ಧರಣಿ ಕೈಗೊಂಡರೂ ಸ್ಪಂದನೆ ಮಾಡ ದಿರುವುದನ್ನು ನೋಡಿದರೆ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ ಎಂದೆನಿಸುತ್ತಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸಲು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು~ ಎಂದು ಕವಿಗಳು ಆಗ್ರಹಿಸಿದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ಯಮುನಾ ಗಾಂವ್ಕರ, ಹರಿಶ್ಚಂದ್ರ ನಾಯ್ಕ, ಸಂತೋಷ ಗೌಡ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.