ಕಾರವಾರ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಕೊಂಕಣ ರೈಲ್ವೆ ಇಲಾಖೆಗೆ ಸೇರಿದ ಅಂದಾಜು ರೂ 60 ಲಕ್ಷ ಮೌಲ್ಯದ ಸರಕುಗಳು ಸುಟ್ಟು ಕರಕಲಾದ ಘಟನೆ ಭಾನುವಾರ ಸಂಜೆ ಹೊರವಲಯದ ಶಿರವಾಡ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ.
‘ಒಂದು ಟೆಂಪೊ, ಗ್ರೀಸ್ ತುಂಬಿದ 35 ಬ್ಯಾರೆಲ್‌ಗಳು, ಹೊಸ ಮತ್ತು ಹಳೆಯ ಟೈರ್‌ಗಳು, ರಬ್ಬರ್ ತುಂಡುಗಳು, ಕೇಬಲ್ ಸೇರಿದಂತೆ ಇತರೆ ವಸ್ತುಗಳು ಸುಟ್ಟುಹೋಗಿವೆ. ಘಟನೆಯಿಂದ ರೈಲು ಸಂಚಾರಕ್ಕೂ ಅಡಚಣೆಯಾಗಿಲ್ಲ’ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ರೈಲು ನಿಲ್ದಾಣದಿಂದ ತುಸು ದೂರದಲ್ಲಿರುವ ಇಲಾಖೆಯ ತಾಂತ್ರಿಕ ವಿಭಾಗದ ಕಚೇರಿಯ ಆವರಣದಲ್ಲಿ ಈ ಸರಕುಗಳನ್ನು ಇಡಲಾಗಿತ್ತು. ಅಲ್ಲಿದ್ದ ಬ್ಯಾರೆಲ್‌ನಿಂದ ಗ್ರೀಸ್ ಸೋರಿಕೆಯಾಗಿದ್ದು, ಇದರ ಸಮೀಪ ರೈಲು ಹಳಿಯ ಜಂಕ್ಷನ್‌ವರೆಗೆ ಜೋಡಿಸಿದ್ದ ವಿದ್ಯುತ್ ತಂತಿಯಿಂದ ಶಾರ್ಟ್ ಸರ್ಕಿಟ್ ಉಂಟಾಗಿ, ಬೆಂಕಿ ಹರಡಿರಬಹುದು ಎನ್ನಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ನಾಲ್ಕು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.