ADVERTISEMENT

ಭಾರತೀಯ ಸಂಸ್ಕೃತಿಯ ದರ್ಶನ ಅನುಭವದಿಂದ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 8:50 IST
Last Updated 5 ಜನವರಿ 2012, 8:50 IST

ಶಿರಸಿ: ಭಾರತೀಯ ಸಂಸ್ಕೃತಿಯನ್ನು ಅನುಭವದ ಕಣ್ಣಿನಿಂದ ನೋಡಬೇಕು, ಆಲೋಚನೆ ಮಾಡಬೇಕು. ಈ ರೀತಿ ಸಂಶೋಧನೆ  ನಮ್ಮ ಸಂಸ್ಕೃತಿ ಮತ್ತು ನಮ್ಮ ಅನುಭವಕ್ಕೆ ಇರುವ ಸಂಬಂಧ ಕಂಡುಕೊಳ್ಳಲು ಸಹಾಯವಾಗುತ್ತದೆ. ಇದು ಯಾವುದೋ ಹೊಸ ಸಿದ್ಧಾಂತ ವಲ್ಲ. ಈ ಸಿದ್ಧಾಂತದ ಮೂಲಕ ಹೊಸ ಸಿದ್ಧಾಂತ ಹುಟ್ಟಲು ಅನುಕೂಲ ವಾಗು ತ್ತದೆ ಎಂಬ ಅಭಿಪ್ರಾಯ ನಗರದಲ್ಲಿ ನಡೆದ ಮೂರು ದಿನಗಳ ಪುರಾಣಸ್ಮೃತಿ ಸಂವಾದ ಲಹರಿ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಮಂಗಳವಾರ ನಗರದ ಟಿಎಂಎಸ್‌ಸಭಾಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂವಾದ ಲಹರಿ ನಿರ್ದೇಶಕ ಬೆಲ್ಜಿ ಯಂನ ಗೆಂಟ್ ವಿಶ್ವವಿದ್ಯಾಲಯದ ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಬಾಲಗಂಗಾ ಧರ, ಐದು ವರ್ಷಗಳವರೆಗೆ ಇಂತಹ ಶಿಬಿರಗಳನ್ನು ಪ್ರತಿವರ್ಷ ಶಿರಸಿಯಲ್ಲಿ ಆಯೋಜಿಸಲಾಗುವುದು ಎಂದರು.

`ವೈಜ್ಞಾನಿಕ ಚರಿತ್ರೆ ಗಮನಿಸಿದರೆ ಯಾವುದೇ ಒಂದು ಸಿದ್ಧಾಂತ ಸತತ ವಾಗಿ ನಿಂತಿಲ್ಲ. ನನ್ನ ವಿಚಾರದ ಮೂಲಕ ಹೊಸ ಸಿದ್ಧಾಂತ ಹುಟ್ಟು ಹಾಕುವಂತಾಗಬೇಕು. ಭಾರತೀಯ ಸಂಸ್ಕೃತಿ ಹಿಂದೆ ಹೇಗಿತ್ತು, ಇಂದು ಹಾಳಾಗುತ್ತಿದೆ ಎಂಬ ಆತಂಕ ನನಗಿಲ್ಲ. ಭಾರತೀಯ ಸಂಸ್ಕೃತಿಯನ್ನು ಭಾರತೀಯ ಅನುಭವದಿಂದ ಓದ ಬೇಕು ಎಂಬುದು ನನ್ನ ವಿಚಾರ. ತರ್ಕಬದ್ಧ ಆಲೋಚನೆ ಮಾಡಿದರೆ ಹೊಸ ಸಿದ್ಧಾಂತ, ಹೈಪೋಥಿಸಿಸ್‌ಗಳು ಬರುತ್ತವೆ~ ಎಂದರು.

`ನಾವು ವಿಶ್ವವಿದ್ಯಾನಿಲಯದಿಂದ ಆಚೆಗೂ ಕೂಡ ಕಲಿಯಬಹುದು ಎಂಬುದರ ಅರಿವಾಗಿದೆ. ಬಾಲ ಗಂಗಾಧರ ಅವರ ವಿಚಾರದಿಂದ ನಾವು ನಮ್ಮ ಸಮಾಜದ ಕುರಿತು ಮಾತ ನಾಡುತ್ತಿಲ್ಲ ಹಾಗೂ ಅದನ್ನು ಹಾಗೆ ಕಲಿಸಿಕೊಟ್ಟ ಪಶ್ಚಿಮವನ್ನು ಕೂಡ ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂಬುದನ್ನು  ಅರಿತುಕೊಂಡಂತಾಗಿದೆ.  ಆಧುನಿಕ ಶಿಕ್ಷಣ ಕತೆ, ಪುರಾಣಗಳಿಂದ ದೂರ ಮಾಡುತ್ತದೆ. ಆದರೆ ನಮ್ಮ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವಲ್ಲಿ ಸಹಾಯವಾಗಿದೆ~ ಎಂದು ಶಿವಮೊಗ್ಗ ಕುವೆಂಪು ವಿವಿ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಉಪನಿರ್ದೇಶಕ ಷಣ್ಮುಖ ಹೇಳಿದರು.

ಮೂರು ದಿನದ ಶಿಬಿರದಲ್ಲಿ ಪಾಲ್ಗೊಂಡ ಪ್ರೊ.ವಿಜಯ ನಳಿನಿ ರಮೇಶ, ಸದಾನಂದ, ಮುರಳೀಧರ ಕುಮಂದಾನ, ಶಿವಮೊಗ್ಗ ಕುವೆಂಪು ವಿವಿ ಅಧ್ಯಯನ ಕೇಂದ್ರದ ನಿರ್ದೇಶಕ ರಾಜಾರಾಮ ಹೆಗಡೆ, ಬರಹಗಾರ ರಮಾನಂದ ಐನಕೈ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.