ADVERTISEMENT

ಮಳೆ: ಜಿಲ್ಲೆಯಲ್ಲಿ 32 ಕೋಟಿ ರೂ ಹಾನಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 10:40 IST
Last Updated 10 ಸೆಪ್ಟೆಂಬರ್ 2011, 10:40 IST

ಕಾರವಾರ: ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ 32 ಕೋಟಿ ರೂ.ಗಳಷ್ಟು ಹಾನಿಯಾಗಿದೆ. 13 ಜನರು ಸಾವಿಗೀಡಾಗಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಳೆಯಿಂದ 19 ಜಾನುವಾರು ಜೀವ ಕಳೆದುಕೊಂಡಿದೆ.
381 ಮನೆ ಹಾನಿಗೊಳಗಾಗಿದ್ದು 301ಕ್ಕೆ ಪರಿಹಾರ ನೀಡಲಾಗಿದೆ. 15 ಹೆಕ್ಟೇರ್ ತೋಟದ ಬೆಳೆ, 25 ಎಕರೆ ಕೃಷಿ ಭೂಮಿಯಲ್ಲಿ ಬೆಳೆ ಹಾನಿಗೊಳಗಾಗಿದೆ. ಕಳೆದ ವರ್ಷಕ್ಕಿಂತ 446 ಮಿಲಿಯನ್ ಮಳೆ ಹೆಚ್ಚಾಗಿದೆ. ಒಟ್ಟು 2953 ಮಿ.ಮೀ ಮಳೆ ಸುರಿದಿದ್ದು, ಭಟ್ಕಳ, ಮುಂಡಗೋಡದಲ್ಲಿ ಕಡಿಮೆ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.