ADVERTISEMENT

ರಂಗ ಮಹೋತ್ಸವಕ್ಕೆ ಶಿರಸಿಯ ನಾಟಕ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 8:45 IST
Last Updated 5 ಜನವರಿ 2012, 8:45 IST

ಶಿರಸಿ: ರಂಗಕರ್ಮಿ ಶ್ರೀಪಾದ ಭಟ್ಟ ನಿರ್ದೇಶನದ `ಕರ್ಣಭಾರ~ ನಾಟಕ ದೆಹಲಿಯ ರಾಷ್ಟ್ರೀಯ ನಾಟಕಶಾಲೆ (ಎನ್.ಎಸ್.ಡಿ.) ನಡೆಸುವ ಭಾರತ ರಂಗ ಮಹೋತ್ಸವಕ್ಕೆ ಆಯ್ಕೆಯಾ ಗಿದೆ.

ಜ.8ರಿಂದ ಜ.22ರವರೆಗೆ ದೆಹಲಿ ಯಲ್ಲಿ ನಡೆಯುವ ನಾಟಕೋತ್ಸವ ದಲ್ಲಿ ಉಡುಪಿ ಜಿಲ್ಲೆಯ ಸಂಗಮ ಕಲಾವಿದರು ಜ.14ರಂದು ಮಹಾಕವಿ ಭಾಸ ವಿರಚಿತ ಕರ್ಣಭಾರ ನಾಟಕ ಪ್ರದರ್ಶಿಸಲಿದ್ದಾರೆ. ಮಹಾಭಾರತದಲ್ಲಿ ಕರ್ಣನ ದುರಂತ ಹಾಗೂ ದುರಂತ ಎದುರಿಸಿದ ಬಗೆಯನ್ನು ಮನೋಜ್ಞ ವಾಗಿ ಚಿತ್ರಿಸುವ ಈ ನಾಟಕ ಶೈಲೀಕೃತ ಅಭಿನಯ, ದೃಶ್ಯ ವೈಭವದ ಮೂಲಕ ಹೆಸರು ಪಡೆದಿದ್ದು ಸ್ಥಳೀಯ ಭಾಷೆ ಯಾದ ತುಳುವಿನಲ್ಲಿಯೇ ಪ್ರದರ್ಶನ ಗೊಳ್ಳಲಿದೆ. ಜಾನಪದ ಹಾಗೂ ಆಧುನಿಕ ರಂಗಭೂಮಿಯ ಆನ್ವಯಿಕ ಶಾಸ್ತ್ರದ ಕುರಿತು ಸಂಶೋಧನೆ ನಡೆಸಿದ ಶ್ರೀಪಾದ ಭಟ್ಟ ಈ ಅನುಭವವನ್ನು ನಾಟಕ ಕಟ್ಟುವಿಕೆಯಲ್ಲಿ ಬಳಸಿ ಕೊಂಡಿದ್ದು ವಿಮರ್ಶಕರಿಂದ ಮೆಚ್ಚಿಗೆ ಪಡೆದಿದೆ.
ಹಿಂದಿನ ವರ್ಷ ಸಹ ಶ್ರೀಪಾದ ಭಟ್ಟ ನಿರ್ದೇಶನದ ಎಚ್.ಎಸ್.ವೆಂಕಟೇಶ ಮೂರ್ತಿ ರಚಿತ ಕಂಸಾಯಣ ನಾಟಕ ದೆಹಲಿಯಲ್ಲಿ ಪ್ರದರ್ಶತಗೊಂಡಿರುವದು ಇಲ್ಲಿ ಉಲ್ಲೇಖನೀಯ. ಉತ್ತರ ಕನ್ನಡ ನಿರ್ದೇಶಕರೊಬ್ಬರ ನಾಟಕ ರಾಷ್ಟ್ರೀಯ ನಾಟಕಶಾಲೆಯಲ್ಲಿ ಪ್ರಯೋಗಗೊಂಡ ಯಶಸ್ಸು ಇದಾ ಗಿದೆ. ಶಿರಸಿಯ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ರುವ ಡಾ.ಶ್ರೀಪಾದ ಭಟ್ಟ ಮೊತ್ತೊಮ್ಮೆ ಎನ್.ಎಸ್.ಡಿ.ಯಿಂದ ಮಾನ್ಯತೆ ಪಡೆದಿದ್ದು, ಚಿಂತನ ಉತ್ತರ ಕನ್ನಡ, ಬಿಎಚ್‌ಶ್ರೀ ಸಮಿತಿ, ರಂಗ ಸೌಗಂಧ ಸಿದ್ದಾಪುರ, ಸರ್ಕಾರಿ ಉರ್ದು ಪ್ರೌಢಶಾಲೆಯ ಶಿಕ್ಷಕ ಬಳಗ ಅವರನ್ನು ಅಭಿನಂದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.