ADVERTISEMENT

‘ರಚನಾತ್ಮಕ ಟೀಕೆಯಿಂದ ಪ್ರಜಾಪ್ರಭುತ್ವಕ್ಕೆ ಬಲ’

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 9:51 IST
Last Updated 5 ಏಪ್ರಿಲ್ 2018, 9:51 IST
ಕಾರವಾರದಲ್ಲಿ ಬುಧವಾರ ಆಯೋಜಿಸಲಾದ ಕೇಬಲ್ ಆಪರೇಟರ್‌ಗಳು, ಪತ್ರಿಕೆಗಳ ಪ್ರಮುಖರು ಮತ್ತು ಪ್ರಕಾಶಕರ ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿದರು
ಕಾರವಾರದಲ್ಲಿ ಬುಧವಾರ ಆಯೋಜಿಸಲಾದ ಕೇಬಲ್ ಆಪರೇಟರ್‌ಗಳು, ಪತ್ರಿಕೆಗಳ ಪ್ರಮುಖರು ಮತ್ತು ಪ್ರಕಾಶಕರ ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿದರು   

ಕಾರವಾರ: ಚುನಾವಣೆಗಳ ಸಂದರ್ಭದಲ್ಲಿ ಮಾಧ್ಯಮಗಳ ತಟಸ್ಥ ನಿಲುವು ಅಗತ್ಯ. ಎಲ್ಲ ಪಕ್ಷಗಳು, ಮುಖಂಡರ ವಿರುದ್ಧ ರಚನಾತ್ಮಕ ಟೀಕೆ
ಗಳಾದಾಗ ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಭಿಪ್ರಾಯಪಟ್ಟರು.ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಕೇಬಲ್ ಟಿವಿ ಆಪರೇಟರ್‌ಗಳು, ಪತ್ರಿಕೆಗಳ ಪ್ರಮುಖರು, ಪ್ರಕಾಶಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತು ನೀಡುವ ಮೊದಲು ಮಾಧ್ಯಮ ಪ್ರಮಾಣಪತ್ರ ಹಾಗೂ ಪರಿವೀಕ್ಷಣಾ ಸಮಿತಿಯಿಂದ ಕಡ್ಡಾಯವಾಗಿ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಜಾಹೀರಾತಿನ ಸ್ವರೂಪ, ಅಳತೆ, ಅದರ ಖರ್ಚನ್ನು ಸಮಿತಿಯು ಪರಿಶೀಲಿಸಿ ಅಭ್ಯರ್ಥಿಯ ಚುನಾವಣಾ ವೆಚ್ಚವೆಂದು ಪರಿಗಣಿಸಲಿದೆ ಎಂದು ಹೇಳಿದರು.

‘ಕಾಸಿಗಾಗಿ ಸುದ್ದಿ’ಯ ಬಗ್ಗೆ ಸಂಶಯ ಮೂಡಿದ ಪತ್ರಿಕಾ ವರದಿಗಳನ್ನು ಈಗಾಗಲೇ ಪರಿಶೀಲಿಸಲಾಗುತ್ತಿದೆ. ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳ ಪರವಾಗಿ ಕರಪತ್ರಗಳನ್ನು ಮುದ್ರಿಸಿದಾಗ ಅವುಗಳ ಕೆಳಭಾಗದಲ್ಲಿ ಪ್ರಕಾಶಕರ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನು ಕಡ್ಡಾಯವಾಗಿ ಮುದ್ರಿಸಬೇಕು. ಹೀಗೆ ಮಾಡದಿದ್ದರೆ ಕರಪತ್ರಗಳನ್ನು ಜಪ್ತಿ ಮಾಡಲಾಗುತ್ತದೆ. ಅಲ್ಲದೇ ಮುದ್ರಣ ಸಂಸ್ಥೆಗಳ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಹಿಮಂತರಾಜು ಮುಂತಾದವರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.