ADVERTISEMENT

ರಾಜಕೀಯ ಜಂಜಡದ ಮಧ್ಯೆ ದೇವರ ದರ್ಶನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 8:55 IST
Last Updated 8 ಫೆಬ್ರುವರಿ 2012, 8:55 IST

ಕಾರವಾರ: ಗೋವಾ ರಾಜ್ಯದ ಮುಖ್ಯ ಮಂತ್ರಿ ದಿಗಂಬರ್ ಕಾಮತ್ ದಂಪತಿ ಮಂಗಳವಾರ ತಾಲ್ಲೂಕಿನ ಅಮ ದಳ್ಳಿಯ ಬಾಳೇರಾಶಿ ಅಷ್ಟವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಅರ್ಚಕ ಮೋಹನ ಅವರೊಂದಿಗೆ ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ರಾಜಕೀಯ ಭವಿಷ್ಯದ ಕುರಿತು ಕಾಮತ್ ಸಮಾಲೋಚನೆ ನಡೆಸಿದರು.

`ಮುಂದಿನ ರಾಜಕೀಯ ಭವಿಷ್ಯ ಉತ್ತಮವಾಗಿದೆ. ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಲಿದ್ದು ಮತ್ತೊಂದು ಅವಧಿಗೆ ನೀವೇ ಮುಖ್ಯಮಂತ್ರಿ ಆಗುತ್ತೀರಿ~ ಎಂದು ಅರ್ಚಕರು ಭವಿಷ್ಯ ನುಡಿದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ದೇವಸ್ಥಾನದ ಭೇಟಿ ಬಳಿಕ ಗುತ್ತಿಗೆ ದಾರರ ಶಿವಪ್ರಸಾದ ಜಿ.ಕೆ. ಅವರ ಕಚೇರಿಗೆ ಆಗಮಿಸಿದ ಅವರು ಸುದ್ದಿ ಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷ ಮೈತ್ರಿ ಚುನಾ ವಣಾ ಮೈತ್ರಿ ಮಾಡಿಕೊಂಡಿದ್ದು, 40 ಸ್ಥಾನಗಳ ಪೈಕಿ ಕಾಂಗ್ರೆಸ್ 33 ಮತ್ತು ಎನ್‌ಸಿಪಿ ಏಳು ಸ್ಥಾನಗಳಲ್ಲಿ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿದೆ. ಒಟ್ಟು 25ರಿಂದ 27 ಸೀಟುಗಳನ್ನು ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಗೆಲ್ಲಲಿದೆ. ಕಾಂಗ್ರೆಸ್ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆದರೆ, 1987ರ ನಂತರ ಗೋವಾ ದಲ್ಲಿ ಐದು ವರ್ಷಗಳ ಅವಧಿ ಪೂರ್ಣ ಗೊಳಿಸಿದ್ದು ಕಾಂಗ್ರೆಸ್ ಸರ್ಕಾರ, ಅದೂ ನನ್ನ ಅವಧಿಯಲ್ಲಿ ಮಾತ್ರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚುನಾವಣೆ ನೀತಿ ಸಂಹಿತೆ ಜಾರಿ ಯಲ್ಲಿರುವುದರಿಂದ ಅಕ್ರಮ ಅದಿರು ವಹಿವಾಟು ತನಿಖೆಗೆ ಸಂಬಂಧಪಟ್ಟಂತೆ ನಾನು ಮಾತನಾಡಲಾರೆ ಎಂದ ಅವರು, ಚುನಾವಣೆ ಮುಗಿದ ಬಳಿ ಕಾಳಿ ನದಿ ಉಸುಕು ಗೋವಾಕ್ಕೆ ಸಾಗಾಟ ಮಾಡುವುದರ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಹಿಂದೆ ಇಲ್ಲಿಗೆ ಬಂದಾಗ ಕಾರವಾರ ವನ್ನು ಗೋವಾದೊಂದಿಗೆ ವಿಲೀನ ಮಾಡಬೇಕು ಎಂದು ಹೇಳಿದ್ದೀರಿ   ಎಂದು ಕೇಳಿದ ಪ್ರಶ್ನೆಗೆ ಇಂತಹ ಹೇಳಿಕೆಗಳನ್ನು ನೀಡಿರಲಿಲ್ಲ ಎಂದಷ್ಟೇ ಹೇಳಿದರು. ಪತ್ನಿ ಆಶಾ ಕಾಮತ್, ಗೋವಾ ಉದ್ಯಮಿ ಶುಭಾಷ್ ನಾಯ್ಕ, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.