ADVERTISEMENT

ಲಾರಿಗೆ ಬೆಂಕಿ: ₨ 40 ಲಕ್ಷ ಹಾನಿ

​ಪ್ರಜಾವಾಣಿ ವಾರ್ತೆ
Published 20 ಮೇ 2014, 10:16 IST
Last Updated 20 ಮೇ 2014, 10:16 IST
ಅಂಕೋಲಾದ ಕಂಚಿನಬಾಗಿಲಿನ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಪೇಂಟ್ ತುಂಬಿದ ಲಾರಿ ಬಿದ್ದು ಬೆಂಕಿಗೆ ಆಹುತಿಯಾಗಿರುವುದು
ಅಂಕೋಲಾದ ಕಂಚಿನಬಾಗಿಲಿನ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಪೇಂಟ್ ತುಂಬಿದ ಲಾರಿ ಬಿದ್ದು ಬೆಂಕಿಗೆ ಆಹುತಿಯಾಗಿರುವುದು   

ಅಂಕೋಲಾ: ಪೇಂಟ್ ತುಂಬಿದ ಲಾರಿಯೊಂದು ಉರುಳಿಬಿದ್ದ ಪರಿಣಾಮ  ಬೆಂಕಿ ತಗುಲಿ ಲಾರಿ ಸಂಪೂರ್ಣವಾಗಿ ಭಸ್ಮ ಗೊಂಡ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನಬಾಗಿಲ ಸಮೀಪ ಸೋಮವಾರ  ಸಂಭವಿಸಿದೆ.

ಈ ಲಾರಿಯು ಅಹಮದಾಬಾದ್‌ನಿಂದ ಎರ್ನಾಕುಲಂಗೆ ಪೇಂಟ್ ತುಂಬಿಕೊಂಡು ಹೊರಟಿತ್ತು ಎನ್ನಲಾಗಿದೆ. ಲಾರಿ ಕಂಚಿನಬಾಗಿಲ ಸಮೀಪ ಬರುತ್ತಿದ್ದಂತೆಯೇ ಆಯತಪ್ಪಿ  ಬಿದ್ದು, ಬೆಂಕಿಗೆ ತುತ್ತಾಯಿತು. 5 ಟನ್ ಪೇಂಟ್ ಹಾಗೂ ಲಾರಿ ಬೆಂಕಿಗೆ ಆಹುತಿಯಾಗಿದ್ದು, ಸುಮಾರು ₨40 ಲಕ್ಷ  ಹಾನಿಯನ್ನು ಅಂದಾಜಿಸಲಾಗಿದೆ.

ಈ ಅವಘಡದಲ್ಲಿ ಲಾರಿ ಚಾಲಕ ಕೇರಳದ ಮಾಹಿನ್ ಜಮಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ದಳದವರು ನೀರು ಸುರಿದರೂ ಬೆಂಕಿ ನಂದದ ಕಾರಣ ಜೆಸಿಬಿಯಿಂದ ಮಣ್ಣು ಹಾಕಿ ಬೆಂಕಿಯನ್ನು ನಂದಿಸಲಾಯಿತು. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.