ADVERTISEMENT

ಶಿಬಿರಗಳಿಂದ ಕಲೆ ಮತ್ತು ಸಂಸ್ಕೃತಿ ಪರಿಚಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 8:45 IST
Last Updated 16 ಅಕ್ಟೋಬರ್ 2012, 8:45 IST

ಕುಮಟಾ: `ರಾಜ್ಯದ ಎಲ್ಲ ಮೂಲೆಗಳ ಜಾನಪದ ಕಲೆ ಮತ್ತು ಸಂಸ್ಕೃತಿಯ ಪರಸ್ಪರ ಪರಿಚಯ ಆಗಬೇಕಾದರೆ ಹಳ್ಳಿಗಳಲ್ಲಿ ಜನಪದ  ತರಬೇತಿ ಶಿಬಿರಗಳು ನಡೆಯಬೇಕು~ ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಈಶ್ವರ ನಾಯ್ಕ ತಿಳಿಸಿದರು.

ಸೋಮವಾರ ತಾಲ್ಲೂಕಿನ ಮಿರ್ಜಾನಿನಲ್ಲಿ ನಡೆದ ರಾಜ್ಯ ಮಟ್ಟದ ಐದು ದಿವಸಗಳ ಜಾನಪದ ತರಬೇತಿ ಶಿಬಿರ  ಉದ್ಘಾಟಿಸಿ ಅವರು ಮಾತನಾಡಿದರು. ದಿನ ನಿತ್ಯದ ಬದುಕಿನ  ನೋವು-ನಲಿವುಗಳು ಎಲ್ಲರದೂ ಒಂದೇ ಆದರೂ, ಅದನ್ನು ಅಭಿವ್ಯಕ್ತಿಗೊಳಿಸುವ ಸ್ಥಳೀಯ ಭಾಷೆ, ರೀತಿ, ಜನ ಜೀವನದ ಮಾತ್ರ  ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಅವುಗಳ ಪರಸ್ಪರ ಪರಿಚಯ ಇಂಥ ಶಿಬಿರಗಳಿಂದಲೇ ಸಾಧ್ಯ~ ಎಂದರು.

ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಪ್ರತಿಮಾ ನಾಯ್ಕ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಗಣೇಶ ಅಂಬಿಗ, ಎಸ್‌ಡಿಎಂಸಿ ಅಧ್ಯಕ್ಷ ಬೀರಪ್ಪ ನಾಯ್ಕ, ತಾರಿಬಾಗಿಲು ಯುವಕ ಸಂಘದ ಅಧ್ಯಕ್ಷ ಸಂತೋಷ ಅಂಬಿಗ,  ಜಟಗೇಶ್ವರ ಯುವಕ ಸಂಘದ ಅಧ್ಯಕ್ಷ ಉಮೇಶ ಪಟಗಾರ, ಅಂಬಿಗ ಸಮಾಜದ ಮುಖ್ಯಸ್ಥ ರಾಮಚಂದ್ರ ಅಂಬಿಗ,  ಮಹಮದ್ ಹಸನ್ ಮೊದಲಾದವರಿದ್ದರು, ರಾಯಚೂರು,  ಕೊಪ್ಪಳ, ಹಾವೇರಿ, ಶಿಮೊಗ್ಗಾ  ಜಿಲ್ಲೆಗಳ 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ಶೈಲೇಶ ನಾಯ್ಕ ನಿರೂಪಿಸಿದರು. ಏಸುದಾಸ ವರದಿ ವಾಚಿಸಿದರು. ಗಜಾನನ ಅಂಬಿಗ ವಂದಿಸಿದರು.

ನೇಮಕ
ಕುಮಟಾ: ಉತ್ತರ ಕನ್ನಡ ಜಿಲ್ಲಾ ಜೆಡಿ(ಎಸ್) ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರಾಗಿ ಕುಮಟಾ ತಾಲ್ಲೂಕಿನ ಅಘನಾಶಿನಿಯ ಲಂಬೋದರ ನಾಯ್ಕ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.