ADVERTISEMENT

ಶಿರಸಿ: ವಿಭಾಗ ಮಟ್ಟದ ಕ್ರೀಡಾಕೂಟ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 9:45 IST
Last Updated 7 ಅಕ್ಟೋಬರ್ 2011, 9:45 IST

ಶಿರಸಿ: ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ನಗರದಲ್ಲಿ ಪ್ರಾರಂಭವಾಗಿದೆ. ಒಂಭತ್ತು ಜಿಲ್ಲೆಗಳ 180 ವಿದ್ಯಾರ್ಥಿ ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
 
15 ಮೇಲ್ವಿಚಾರಕರು, 30ರಷ್ಟು ನಿರ್ಣಾಯಕರು ಸ್ಪರ್ಧೆಯ ಯಶಸ್ಸಿಗೆ ಕೆಲಸ ಮಾಡುತ್ತಿದ್ದಾರೆ. ಹಿಂದಿನ ವರ್ಷ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗ ವಹಿಸಿದ್ದ ಮೇಘನಾ ಕುಲಕರ್ಣಿ, ಮೇರಾನಾ ಇರಾಣಿ, ಸುಚಿತಾ ಇರಾನಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ನಗರದ ರೋಟರಿ ಪ್ರತಿಷ್ಠಾನ ಸಭಾ ಭವನದಲ್ಲಿ ಆಯೋಜಿಸಿದ್ದ ಕ್ರೀಡಾ ಸ್ಪರ್ಧೆಯನ್ನು ಮಂಗಳವಾರ ಬ್ಯಾಡ್ಮಿಂಟನ್ ಆಡುವ ಮೂಲಕ ಉದ್ಘಾಟಿಸಿದರು.

ರಾಜ್ಯ ಸರ್ಕಾರ ಪಠ್ಯ ಚಟುವಟಿಕೆ ಜೊತೆಗೆ ಪಠ್ಯೇತರ ಚಟುವಟಿಕೆಗೂ ಮಹತ್ವ ನೀಡಿದೆ. ವಿದ್ಯಾರ್ಥಿಗಳು ಪಠ್ಯದ ಅಭ್ಯಾಸದೊಂದಿಗೆ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪ್ರೌಢಶಾಲಾ ಮಟ್ಟ ದಲ್ಲಿ ಆರೋಗ್ಯ ತಂಡ ರಚನೆ ಮಾಡ ಲಾಗಿದೆ. ವಿದ್ಯಾರ್ಥಿಗಳು ಧ್ಯಾನ, ಯೋಗದಲ್ಲಿ ನಿರಂತರ ಭಾಗವಹಿಸುವ ಮೂಲಕ ದುಶ್ಚಟಗಳಿಂದ ದೂರ ಇರ ಬೇಕು ಎಂದು ಅವರು ಹೇಳಿದರು. ದೈಹಿಕ ಶಿಕ್ಷಕರ ಸಮಸ್ಯೆ ಬಗೆಹರಿಸಲು ಸರ್ಕಾರ ಮಟ್ಟದಲ್ಲಿ ಪ್ರಯತ್ನ ನಡೆ ಯುತ್ತಿದೆ ಎಂದರು.
 
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ರವಿ ಚಂದಾವರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಂಗಲಾ ಭಟ್ಟ, ಜಿಲ್ಲಾ ಪಂಚಾ ಯಿತಿ ಸದಸ್ಯರಾದ ಶೋಭಾ ನಾಯ್ಕ, ಉಷಾ ಹೆಗಡೆ, ದೈಹಿಕ ಶಿಕ್ಷಣ ಆಯು ಕ್ತರ ಕಚೇರಿ ಉಪನಿರ್ದೇಶಕ ಎಸ್. ಪಿ.ಕಾಗಲೆ, ಉದಯ ಸ್ವಾದಿ ಮತ್ತಿತ ರರು ಉಪಸ್ಥಿತರಿದ್ದರು. ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಡಿ.ಕೆ.ಶಿವಕು ಮಾರ ಸ್ವಾಗತಿಸಿದರು. ಕ್ಷೇತ್ರಶಿಕ್ಷಣಾ ಧಿಕಾರಿ ಎಸ್.ರಾಜಕುಮಾರ ವಂದಿಸಿ ದರು. ಅಶೋಕ ಭಜಂತ್ರಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.