ADVERTISEMENT

ಸಡಗರದಿಂದ ಜರುಗಿದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 9:50 IST
Last Updated 2 ಏಪ್ರಿಲ್ 2012, 9:50 IST

ಭಟ್ಕಳ: ಇತಿಹಾಸ ಪ್ರಸಿದ್ಧ ಭಟ್ಕಳದ ಗ್ರಾಮ ದೇವತೆ ಶ್ರೀ ಚೆನ್ನಪಟ್ಟಣ ಹನು ಮಂತ ದೇವರ ಮಹಾರಥೋತ್ಸವ ರಾಮನವಮಿ ದಿನವಾದ ಭಾನುವಾರ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಸಂಭ್ರಮ ಸಡಗರ ದೊಂದಿಗೆ ಜರುಗಿತು.

ಯುಗಾದಿಯ ದಿನದಿಂದಲೇ ರಥೋತ್ಸವದ ಪೂರ್ವಭಾವಿ ಧಾರ್ಮಿಕ ಕಾರ್ಯಗಳು ಆರಂಂಭ ವಾಗಿ, ದಿನಕ್ಕೊಂದು ವಾಹನದಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಗಿತ್ತು. ರಥೋತ್ಸವದ ಹಿಂದಿನ ದಿನ ಶನಿವಾರ ರಾತ್ರಿ ಹೂವಿನ ತೇರು ನಡೆಯಿತು. ರಥೋತ್ಸವದ ದಿನವಾದ ಭಾನುವಾರ ಶ್ರೀ ಹನುಮಂತ ದೇವರಿಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಲಾಯಿತು.

ಬೆಳಗ್ಗೆಯಿಂದ ಸಂಜೆವರೆಗೆ ಸಾವಿ ರಾರು ಭಕ್ತಾಧಿಗಳು ರಥಕಾಣಿಕೆ, ಪೂಜೆ ಸಲ್ಲಿಸಿ ಕೃತಾರ್ಥರಾದರು.ರಥ ಎಳೆಯುವುದಕ್ಕೂ ಮುನ್ನ ಹಿಂದಿ ನಿಂದಲೂ ಬಂದ ಸಂಪ್ರದಾಯದಂತೆ ಮುಸ್ಲಿಂ ಸಮಾಜದ ಚರ್ಕಿನ ಕುಟುಂಬ ಹಾಗೂ ಜೈನ್ ಸಮುದಾಯದ ಕುಟುಂಬವೊಂದರ ಮನೆಗೆ ದೇವ ಸ್ಥಾನದ ಆಡಳಿತ ಮಂಡಳಿಯವರು ವಾದ್ಯಗೋಷ್ಠಿಯೊಂದಿಗೆ ತೆರಳಿ ರಥೋತ್ಸವಕ್ಕೆ ಆಮಂತ್ರಿಸಿ ಗೌರವ ಸೂಚಿಸಿದರು.ನಂತರ ಸಂಜೆ 5.30ರ ಸುಮಾರಿಗೆ ಶ್ರೀ ಹನುಮಂತ ದೇವರನ್ನು ಹೊತ್ತ ರಥವನ್ನು ಸಾವಿರಾರು ಭಕ್ತಾದಿ ಗಳ ಜಯಘೋಷದೊಂದಿಗೆ ಎಳೆಯ ಲಾಯಿತು.

ವೇದಮೂರ್ತಿ ರಮಾನಂದ ಅವ ಭೃತ ಮತ್ತು ಪರಿವಾರದವರು ರಥೋತ್ಸವದ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೇವಸ್ಥಾನದ ಅರ್ಚಕ ರಾದ ಶ್ರೀಧರ ದೀಕ್ಷಿತ್ ಮತ್ತು ವೃಂದ ವರು ಸಹಕರಿಸಿದರು. ತಟ್ಟಿ ರಾಯ, ಹುಲಿವೇಷ, ಬೇಡರ ಕುಣಿತ, ಯುವಕರ ಭಜನೆ, ನೃತ್ಯಗಳು ರಥೋತ್ಸವಕ್ಕೆ ಮತ್ತಷ್ಟು ಮೆರಗು ನೀಡಿತ್ತು.

ದೇವಸ್ಥಾನದ ಆಡಳಿತ ಮಂಡಳಿಯ ಸುರೇಂದ್ರ ಶಾನುಭಾಗ್,ಬಾಲಕೃಷ್ಣ ಶಾಸ್ತ್ರಿ, ಪುರಸಭೆ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ. ಎಲ್ಲಾ ಸಮಾಜದ ಪ್ರಮುಖರು ಸೇರಿದಂತೆ ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ರಥೋತ್ಸ ವದಲ್ಲಿ ಪಾಲ್ಗೊಂಡಿದ್ದರು.

ಎಸ್.ಪಿ.ಕೆಟಿ ಬಾಲಕೃಷ್ಣ, ಹೆಚ್ಚುವರಿ  ಎಸ್.ಪಿ. ಸುಭಾಷ್ ಗುಡಿಮನೆ,ಡಿ.ಎಸ್.ಪಿ.ಎಂ. ನಾರಾಯಣ ರಥೋತ್ಸವದ ಸಂದರ್ಭ ದಲ್ಲಿ ಉಪಸ್ಥಿತರಿದ್ದು, ಪೊಲೀಸ್ ಸಿಬ್ಬಂದಿಗಳಿಗೆ ಮಾಗದರ್ಶನ ನೀಡಿ ಬಿಗು ಬಂದೋಬಸ್ತ ಏರ್ಪಡಿಸಿದ್ದರು.

`ನಿಸ್ವಾರ್ಥ ಸೇವೆಯಿಂದ ಬದುಕಿನಲ್ಲಿ ನೆಮ್ಮದಿ~

ಹೊನ್ನಾವರ: `ಸಂಘ ಜೀವಿಯಾಗಲು ಬಯಸುವ ವ್ಯಕ್ತಿಯಲ್ಲಿ ಸೇವಾ ಮನೋಭಾವ ಅಗತ್ಯ~ ಎಂದು ಹಳದೀ ಪುರದ ಆರ್.ಇ. ಎಸ್. ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಎಚ್.ಎನ್. ಪೈ ಹೇಳಿದರು.
ಇಲ್ಲಿನ ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಿಸ್ವಾರ್ಥ ಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಪಡೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಎನ್‌ಎಸ್‌ಎಸ್ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಸಮಾಜ ಮುಖಿಯಾಗಿರಬೇಕು ಎಂದು        ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಜಿ.ಎನ್. ಭಟ್ ಸಲಹೆ ನೀಡಿ ದರು.
ರಾಜು ನಾಯ್ಕ ಕಾರ್ಯಕ್ರಮ ನಿರೂಪಿಸಿದರು.         

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.