ADVERTISEMENT

‘ಶೈಕ್ಷಣಿಕ ಪ್ರಗತಿಯಲ್ಲಿ ತಾಯಿ ಪಾತ್ರ ಪ್ರಮುಖ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 6:46 IST
Last Updated 12 ಸೆಪ್ಟೆಂಬರ್ 2013, 6:46 IST

ದಾಂಡೇಲಿ: ‘ಮಗುವಿನ ಶೈಕ್ಷಣಿಕ ಪ್ರಗತಿಯಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿದ್ದು, ಪ್ರತಿಹಂತದಲ್ಲಿ ಮಗುವಿನ ಚಲನವಲನವನ್ನು ತಾಯಂದಿರು ಸುಲಭವಾಗಿ ತಿಳಿಯಬಲ್ಲರು. ಆದ್ದರಿಂದ ಮಕ್ಕಳ ತಪ್ಪುಗಳನ್ನು ತಿದ್ದಿ ಅವರ ಶೈಕ್ಷಣಿಕ ಪ್ರಗತಿಗೆ ತಾಯಿ ಸುಲಭವಾದ ಸೂಕ್ತ ಮಾರ್ಗದರ್ಶನ ನೀಡಬಲ್ಲಳು’ ಎಂದು ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ನಾಯ್ಕ ಅಭಿಪ್ರಾಯಪಟ್ಟರು.

ಇಲ್ಲಿಯ ಜನತಾ ವಿದ್ಯಾಲಯದ ಪ್ರೌಢಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳ ತಾಯಂದಿರ ಸಭೆಯಲ್ಲಿ ಅವರು ಮಾತನಾಡಿದರು.

‘ಮಕ್ಕಳನ್ನು ಮೊಬೈಲ್ ಬಳಕೆ ಹಾಗೂ ದೂರದರ್ಶನ ವೀಕ್ಷಣೆಯಿ ದೂರವಿಡಬೇಕಾದ ಅಗತ್ಯವಿದೆ’ ಎಂದರು.

ಸಹಶಿಕ್ಷಕ ಅಶೋಕ ಭಟ್ ಮಕ್ಕಳ ಸರ್ವತೋಮುಖ ಪ್ರಗತಿಯಲ್ಲಿ ತಾಯಂದಿರ ಪಾತ್ರ ಕುರಿತು ಮಾತನಾಡಿ, ’ಮಕ್ಕಳಲ್ಲಿ ನೈತಿಕತೆ ಹಾಗೂ ವಿನಯಪೂರ್ವಕ ನಡವಳಿಕೆಯನ್ನು ಬೆಳೆಸುವಲ್ಲಿ ತಾಯಂದಿರು ಹೆಚ್ಚು ಗಮನಹರಿಸಬೇಕು’ ಎಂದರು. ಮುಖ್ಯ ಶಿಕ್ಷಕಿ ಸರಸ್ವತಿ.ಬಿ.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕ ಮಹೇಶ ನಾಯ್ಕ ನಿರೂಪಿಸಿದರು. ಸಹಶಿಕ್ಷಕಿ ಅಂಜಲಿ ಶಹಪೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.