ADVERTISEMENT

ಸಾಗರ ಕವಚ: 5 ಬಾಂಬ್ ಪತ್ತೆ, 17 ಮಂದಿ ವಶಕ್ಕೆ

ವಿವಿಧ ಭದ್ರತಾ ಇಲಾಖೆಗಳಿಂದ ಅಣಕು ಕಾರ್ಯಾಚರಣೆಯ ಮೊದಲ ದಿನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 14:58 IST
Last Updated 6 ನವೆಂಬರ್ 2019, 14:58 IST
ಕಾರವಾರದ ರೈಲು ನಿಲ್ದಾಣದಲ್ಲಿ ಬುಧವಾರ ನಡೆದ ಅಣಕು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿ
ಕಾರವಾರದ ರೈಲು ನಿಲ್ದಾಣದಲ್ಲಿ ಬುಧವಾರ ನಡೆದ ಅಣಕು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿ   

ಕಾರವಾರ: ವಿವಿಧ ಭದ್ರತಾ ಇಲಾಖೆಗಳು ಬುಧವಾರ ಸಂಯುಕ್ತವಾಗಿ ‘ಸಾಗರ ಕವಚ’ ಅಣಕು ಕಾರ್ಯಾಚರಣೆಯನ್ನು ಆರಂಭಿಸಿದವು. ತದಡಿ ಮೀನುಗಾರಿಕಾ ಬಂದರು,ಕಾರವಾರದ ವಾಣಿಜ್ಯ ಬಂದರು, ರೈಲ್ವೆ ನಿಲ್ದಾಣ ಮುಂತಾದೆಡೆ ಐದು ಬಾಂಬ್‌ಗಳನ್ನು ಪತ್ತೆ ಹಚ್ಚಿ 17 ಮಂದಿ ಶಂಕಿತರನ್ನು ಬಂಧಿಸುವ ಅಣಕು ಪ್ರದರ್ಶಿಸಲಾಯಿತು.

829ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಈ ಸಂಬಂಧ ಸೂಕ್ಷ್ಮ ಪ್ರದೇಶಗಳಲ್ಲಿಭದ್ರತೆ ಹೆಚ್ಚಿಸಲಾಗಿತ್ತು. ಸಮುದ್ರದಲ್ಲಿಯೂ ಕರಾವಳಿ ಕಾವಲು ಪಡೆಯವರು ಗಸ್ತು ತಿರುಗುತ್ತಿದ್ದರು. ಕಾರ್ಯಾಚರಣೆಯ ಭಾಗವಾಗಿ ‘ರೆಡ್ ಫೋರ್ಸ್’ ಎಂದು ಕರೆಸಿಕೊಳ್ಳುವ ಭದ್ರತಾ ಸಿಬ್ಬಂದಿಯೇಮಾರುವೇಷದಲ್ಲಿ ಹುಸಿ ಬಾಂಬ್‌ಗಳನ್ನುಸಾಗಿಸುತ್ತಿದ್ದರು. ಅವರನ್ನು ತಪಾಸಣೆ ನಡೆಸುವ ‘ಬ್ಲೂ ಫೋರ್ಸ್’ ತಂಡದವರು ಪತ್ತೆ ಹಚ್ಚಿದರು.

ಈ ಕಾರ್ಯಾಚರಣೆಯು ಎರಡು ದಿನ ನಡೆಯಲಿದೆ.ಶಿರವಾಡದ ರೈಲುನಿಲ್ದಾಣ ಮತ್ತು ಗೋಕರ್ಣದ ಮೇನ್ ಬೀಚ್‌ನಲ್ಲಿ ಇಬ್ಬರನ್ನು, ಕುಮಟಾದ ತದಡಿ ಬಂದರಿನಲ್ಲಿ ಐವರನ್ನು ಹಾಗೂ ಕಾರವಾರದ ದೇವಘಡ ಲೈಟ್‌ ಹೌಸ್ ಸಮೀಪ ಎಂಟು ಮಂದಿಯನ್ನು ವಶಕ್ಕೆಪಡೆಯುವ ಅಣಕು ಕಾರ್ಯಾಚರಣೆ ಮೊದಲ ದಿನ ನೆರವೇರಿತು.

ADVERTISEMENT

ಗೋಕರ್ಣದಲ್ಲೂಕಾರ್ಯಾಚರಣೆ

ಇಲ್ಲಿನ ಮೇನ್‌ ಬೀಚ್‌ನಲ್ಲೂ ‘ಸಾಗರ ಕವಚ’ ಅಣಕು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಸಮುದ್ರದ ಮೂಲಕ ಗೋಕರ್ಣಕ್ಕೆ ಪ್ರವೇಶ ಮಾಡಿದ ಇಬ್ಬರು ಮಾರುವೇಷಧಾರಿಗಳನ್ನು ಕುಮಟಾದ ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಶಕ್ಕೆ ಪಡೆದರು.

ಸಣ್ಣ ದೋಣಿಯ ಮೂಲಕ ಸಮುದ್ರದಮೂಲಕಮೇನ್ ಬೀಚ್ ಪ್ರವೇಶಿಸಿದವರು ಸ್ಫೋಟಕವಿದ್ದ ಚೀಲವನನ್ನು ಹಿಡಿದುಕೊಂಡು ಬಂದಿದ್ದರು. ಕೂಡಲೇ ಅವರನ್ನು ಸುತ್ತುವರಿದ ಕರಾವಳಿ ಕಾವಲು ಪಡೆಯ ಸಿಬ್ಬಂದಿ, ಇಬ್ಬರನ್ನೂ ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.