ADVERTISEMENT

ಸಿದ್ದಾಪುರ: ಎ.ಪಿ.ಜೆ ಅಬ್ದುಲ್ ಕಲಾಂ ಪ್ರಶಸ್ತಿಗೆ 6 ಜನ ಶಿಕ್ಷಕರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 15:23 IST
Last Updated 2 ಸೆಪ್ಟೆಂಬರ್ 2024, 15:23 IST
 ಪ್ರಕಾಶ ಆಚಾರಿ
 ಪ್ರಕಾಶ ಆಚಾರಿ   

ಸಿದ್ದಾಪುರ: 2024ನೇ ಸಾಲಿನ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನೀಡುವ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲ್ಲೂಕಿನ ಆರು ಜನ ಶಿಕ್ಷಕರು ಆಯ್ಕೆಯಾಗಿದ್ದಾರೆ.

ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಹೊಸಳ್ಳಿಯ ಸಹ ಶಿಕ್ಷಕ ಪ್ರಕಾಶ ಆಚಾರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸೂರಿನ ಸಹ ಶಿಕ್ಷಕಿ ಸುರೇಖಾ ಹೆಗಡೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಂದಾನೆಯ ಪದೋನ್ನತ ಮುಖ್ಯಶಿಕ್ಷಕಿ ಲಕ್ಷ್ಮೀನಾಯ್ಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗರಣಿಯ ಪದೋನ್ನತ ಮುಖ್ಯಶಿಕ್ಷಕ ನಾರಾಯಣ ಅಗೇರ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಳೇನಳ್ಳಿಯ ಸಹ ಶಿಕ್ಷಕ ಶ್ರೀಧರ.ಎನ್ ಭಟ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತ್ಯಾಗಲಿಯ ಪದೋನ್ನತ ಮುಖ್ಯ ಶಿಕ್ಷಕ ವೀರೇಶ ಜಿ.ನಾಯ್ಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಾಗಿದ್ದಾರೆ.

ಸೆ 5 ರಂದು ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT
ನಾರಾಯಣ ಅಗೇರ
ಲಕ್ಷ್ಮೀ ನಾಯ್ಕ
ವೀರೇಶ  ಜಿ. ನಾಯ್ಕ
ಶ್ರೀಧರ .ಎನ್. ಭಟ್
ಸುರೇಖಾ ಹೆಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.